ಅಲ್ಲಂಚೂರ್ ಇಲ್ಲಂಚೂರ್ ತಪ್ಪಾತ್ ‘ ಹೊಟ್ಟಿಗ್ ಹೈಕಣಿ

ಇಲ್ಕಾಣಿ, ‘ ನಾ ಬರೀತೆ, ಆರೆ ಭಾಷಿ ಮ್ಯಾಲೆ ಹಿಡಿತ ಇಲ್ಲ ; ಅಲ್ಲಂಚೂರ್ ಇಲ್ಲಂಚೂರ್ ತಪ್ಪಾತ್ ‘ ಹೊಟ್ಟಿಗ್ ಹೈಕಣಿ .
ಯಾರ್ಯಾರೋ, ಎಂತೆಂದದ್ದೋ ಬರಿತ್ರಂಬ್ರ ?  ಅದ್ಕೆ ನಾ ಬರಿಯುದ್, ನಂಗ್ ಹೊಟ್ಟಿ ಕಿಚ್ಚೆ ; ಏನೀಗ? ನಿಮ್ಗಾರೆ, ಓದ್ಕಣಿ ಇಲ್ಲಾರ್ ಸುಮ್ನಿರಿ. ನಿವೋಬ್ರ್ ಓದಿಲ್ಲಾಂದ್ರೆ ಎಂತಾದ್ದು ಹಳಸಿ ಹೊತ್ತಿಲ್ಲ!

ಹಂಗಾರೆ, ನೀವ್ ಈಗ ಓದತೆ ಅಂಬುದಾ? ನೀವ್ ಒಂಥರಾ ಮುಸುಡ್ ಗಂಟ್ ಹೈಕಂಬುದು ಬ್ಯಾಡ; ಹೊಟ್ಟಿ ತಿಪ್ಪ್ ಹೈಕಂಡೆಲ್ಲ ಓದುದು ಬ್ಯಾಡ. ನಿಮ್ಗೆ, ಅಲ್ ಯಾರ್ಯಾರೋ ಮಾಡಿದ್ ರೀಲ್ಸ್ ಇತ್ ಕಾಣಿ. ಹೊಯ್ನಿ ಕಾಣಿಯೇ.

ಅಲ್ಲಾ, ನಾ ನಿಮ್ಗೆ ಎಂತದ್ದರೂ ಹೇಳುಕ್ ಆತ್ತಾ? ನಿಮ್ ಮನಸ್ ನಿಮ್ ಖುಷಿ. ಕಂಡ್ ಕಂಡ್ ಕಣ್ ಹೊಟ್ಟಿ ಹೋಯ್ಲಿ; ನಂಗೇನ್!
ಅಲ್ದೆ ಹೋರ್ ಮತ್ತೆಂತ? 30 ಸೆಕೆಂಡ್ ರೀಲ್ಸ್ ಅಂದಳಿಕೆ ಮೂರ್ ಹೊತ್ತು ಅದರಾಗೆ ಬಿದ್ ಇರ್ತ್ರೀ. ಆದ್ರೆ, ನಾ ಬರೆದಿದ್ ಒಂದೆರಡ್ ಅಕ್ಷರು ಓದುಕೆ ನಿಮ್ಗೆ ಪುರಸೋತ್ ಇರುದಿಲ್ಲ. ರಿಲ್ಸಲ್ ಹಾಕಿದ್ ಕಾಮೆಂಟ್ಸ್ ಓದುಕಾತ್, ನಾ ಗೀಚಿದ್ ನಾಲ್ಕ ಅಕ್ಷರು ಓದುಕೆ ನಿಮ್ಗೆ ಮನ್ಸಿಲ್ಲ.

ನಿಮ್ಗೆ ಮನ್ಸಿಗ್ ತಂಪಯ್ಲಾ ಅಂದ್ರು ಕಣ್ಣಿಗ್ ತಂಪಾಯ್ಕ. ನಿಮ್ಗೆ ಟೈಮ್ಮೆ ಇಲ್ಲಾಂದ್ರು ಟೈಮ್ ಪಾಸ್ಗೆ ರೀಲ್ಸ್ ಬೇಕೆ ಬೇಕ್. ಆದ್ರೆ, ನಮ್ದು ಹಾಂಗ?

ಹುಂ, ಹಮ್ಮಯ್ಯ!! ಕಣ್ ಬಿಟ್ಕಂಡ್ ಇಸ್ಟ್ ಓದ್ರಿಯಲಾ. ಅಷ್ಟು ಸಾಕ್, ಇವತ್ತಿಗೆ. ಹೌದೇ… ನಂಗ್ ಕೊಬ್ಬೆ ! ಏನೀಗ? ನಿಮ್ಗೆ ಕಾಂಬುಕೆ ತಲ್ಬು , ಹಾಂಗೆ, ನಂಗೆ ಹಿಂಗಿದ್ದೆಲ್ಲ ಬರಿಯುಕೆ ತಲ್ಬು.
ಟೈಮ್ ಪಾಸ್ಸಿಗೆ ಎಂತಾರು ಬೇಕಲ್ದೆ. ಅದ್ಕೆ, ಇಷ್ಟೆಲ್ಲ.

ಮತ್ತೇ, ಕಾಣಿ. ಮೊದ್ಲೇ ಹೇಳಿದೆ, ನಂಗೆ ಭಾಷಿ ಮ್ಯಾಲೆ ಹಿಡಿತ ಇಲ್ಲ ; ಅಲ್ಲಂಚೂರ್ ಇಲ್ಲಂಚೂರ್ ತಪ್ಪಾತ್ ಹೊಟ್ಟಿಗ್ ಹೈಕಣಿ.

✍️ ರಾಘವೇಂದ್ರ ಏನ್ ದೇವಾಡಿಗ
ಉಳ್ಳೂರು 11, ಬೈಂದೂರು – 576219
+91 9743059880
k.raghu794@gmail.com

SHARE
Loading spinner

Leave a Reply

Your email address will not be published. Required fields are marked *

error: Content is protected !!