ಡೆಮ್ಮoಗರ ಮಸೀದಿಯಲ್ಲಿ ಜಲಾಲಿಯ್ಯ ರಾತೀಬ್

ಪುತ್ತೂರು /ಬೆಟ್ಟoಪಾಡಿ : K K ಮಸ್ಜಿದ್ & ಬುಸ್ತಾನುಲ್ ಉಲೂಮ್ ದರ್ಸ್ ಅಹ್ದಲಿಯ ನಗರ ಡೆಮ್ಮoಗರ, ಬೆಟ್ಟoಪಾಡಿ ಇದರ ಆಶ್ರಯದಲ್ಲಿ 3 ತಿಂಗಳಿಗೊಮ್ಮೆ ನಡೆಸಿಕೊoಡು ಬರುತ್ತಿರುವ ಜಲಾಲಿಯ್ಯ ರಾತೀಬ್ ಕಾರ್ಯಕ್ರಮವು ಬಹು | ಅಸ್ಸಯ್ಯದ್ ಮುಖ್ತಾರ್ ತಂಗಳ್ ಕುಂಬೋಲ್ ಇವರ ನೇತೃತ್ವದಲ್ಲಿ ನಡೆಯಿತು. ಬಹು | ಅಸ್ಸಯ್ಯದ್ ಹಾಶಿಮ್ ತಂಗಳ್ ಕೊರಿಂಗಿಲ, ಬಹು|ಅಬ್ಬಾಸ್ ಸಅದಿ ಮುದರ್ರಿಸ್ ಡೆಮ್ಮoಗರ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಕಛೇರಿ ಹಾಗೂ ಕಂಪ್ಯೂಟರ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮವನ್ನು ಬಹು | ಅನ್ವರ್ ತಂಗಳ್ ತ್ರಿಕರಿಪುರ ಇವರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಲವಾರು ಪ್ರಮುಖ ಉಲಮಾಗಳು, ಸಾದಾತುಗಳು, ಸಾಮಾಜಿಕ, ಧಾರ್ಮಿಕ ಮುಖಂಡರು ಸೇರಿ ನೂರಾರು ಮಂದಿ ಭಾಗವಹಿಸಿದ್ದರು. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳವಕಾಶ ಏರ್ಪಡಿಸಲಾಗಿತ್ತು, ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.ಜಲಾಲಿಯ್ಯ ರಾತೀಬ್ ಸಮಿತಿಯ ಪದಾಧಿಕಾರಿಗಳು ವಿವಿಧ ಕೆಲಸಗಳಲ್ಲಿ ಸಹಕರಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!