ಮಂಗಳೂರು: ನಗರದ ಫಳ್ನೀರ್ ಸಮೀಪದ ಟೋಪಾಜ್ ಕಾರ್ ಸೆಂಟರ್ನಲ್ಲಿ ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಎರಡು ಬಿಎಂಡಬ್ಲ್ಯು ಕಾರುಗಳು ಹಾನಿಗೊಳಗಾಗಿ ಅಪಾರ ಸ್ವತ್ತು ನಾಶವಾಗಿದೆ.
ಇಂದು ಬೆಳಗ್ಗೆ ಸುಮಾರು 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬೆಂಕಿ ತೀವ್ರತೆಯಿಂದ ಸೆಂಟರ್ನಲ್ಲಿ ಇದ್ದ ವಾಹನಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.ಈ ಸಂಸ್ಥೆ ಮಾಜಿ ಶಾಸಕ ಮೊಯ್ದೀನ್ ಬಾವ ಅವರ ತಂಗಿಯ ಮಗ ಸಿಯಾಜ್ ಅವರಿಗೆ ಸೇರಿದ್ದಾಗಿದೆ.ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಶ್ರಮಿಸಿದ್ದು, ಹೆಚ್ಚಿನ ಹಾನಿಯನ್ನು ತಪ್ಪಿಸಿದರು.