ಮಂಗಲ್ಪಾಡಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನ ಹಾಗೂ 29ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ

ಡಾ. ಬಿ ಆರ್ ಅಂಬೇಡ್ಕರ್ ಗ್ರಾಮ ವಿಕಸನ ಮತ್ತು ಕಲಾವೇದಿಕೆ ಮಂಗಲ್ಪಾಡಿ ಇದರ 29ನೇ ವಾರ್ಷಿಕೋತ್ಸವ ಮತ್ತು ಸಂವಿದಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ಇತ್ತೀಚಿಗೆ ಮಂಗಲ್ಪಾಡಿಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯ ಶ್ರೀ ವಸಂತಕುಮಾರ್ ಮಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು ಹಾಗೂ ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ಇದರ ಸ್ಥಾಪಕ ಸದಸ್ಯರಾದ ಶ್ರೀ ನಾರಾಯಣ ಬಾರಡ್ಕ ಇವರು ಅಂಬೇಡ್ಕರ್ ತತ್ವ ಮತ್ತು ವಿಚಾರಗಳ ಬಗ್ಗೆ ಮಾತನಾಡಿದರು.

ಕೂಬಣೂರು ಅಂಬೇಡ್ಕರ್ ಕಲಾ ಸಂಘದ ಅಧ್ಯಕ್ಷರಾದ ಶಿವ ಕುಬಣೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಹಿರಿಯ ಯಕ್ಷಗಾನ ಗುರು ಶ್ರೀ ರಾಮ ಸಾಲ್ಯಾನ್ ಮತ್ತು ಭರತನಾಟ್ಯ, ಯಕ್ಷಗಾನ ಕಲಾವಿದೆ,ಯೊಗಪಟು ಕುಮಾರಿ ಅಶ್ವಿನಿ ಮಂಗಲ್ಪಾಡಿ ಇವರನ್ನು ಶಾಲು ಹೊದಿಸಿ ಸನ್ಮಾನಿಸಿ ಅಭಿನಂದನಾ ಪತ್ರವನ್ನು ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕಲಾ ವೇದಿಕೆಯ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ಮಂಗಲ್ಪಾಡಿ ವಹಿಸಿದ್ದರು.
ಸುಶ್ಮಿತಾ ಮತ್ತು ಬಳಗ ಕ್ರಾಂತಿ ಗೀತೆಯನ್ನು ಹಾಡಿದರು. ವೇದಿಕೆಯ ಕಾರ್ಯದರ್ಶಿ ಶ್ರೀ ಹರೀಶ್ ಕುಮಾರ್ ಮಂಗಲ್ಪಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಇದೇ ವೇಳೆ ಆಟೋಟ ಸ್ಪರ್ಧೆ ಯಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.

ಶ್ರೀಮತಿ ಅಮಿತಾ ಸುರೇಶ್ ಸ್ವಾಗತಿಸಿ ಶ್ರೀ ಜಗದೀಶ್ ಕುಮಾರ್ ಮಂಗಲ್ಪಾಡಿ.ಧನ್ಯವಾದ ಸಮರ್ಪಿಸಿದರು. ಶ್ರೀ ಸುರೇಶ್ ಕುಮಾರ್ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ತುಳುವೆರೆ ಉಡಲು ಜೊಡುಕಲ್ಲು ಇವರ ಅಭಿನಯದ ಶ್ರೀ ಸುರೇಶ್ ಶೆಟ್ಟಿ ಜೋಡುಕಲ್ಲು ನಿರ್ಮಾಣ ಮಾಡಿದ ನಾಟಕ ಡೆನ್ನ ಡೆನ್ನಾನ ಜನ ಮನ ರಂಜಿಸಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!