ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಸ್ವರೂಪ(ರಿ) ಕುಂಜತ್ತಬೈಲ್,ಮಂಗಳೂರು ಇದರ ವತಿಯಿಂದ ರಂಗ ಸ್ವರೂಪ ‘ರಂಗೋತ್ಸವ’ 2026 ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮ ದ.ಕ ಜಿ.ಪಂ ಮಾ.ಹಿರಿಯ ಪ್ರಾಥಮಿಕ ಶಾಲೆ ಮರಕಡ, ಕುಂಜತ್ತಬೈಲ್ ಇಲ್ಲಿ ರಂಗ ಸ್ವರೂಪ ತಂಡದ ಉಪಾಧ್ಯಕ್ಷರಾದ ಹುಸೈನ್ ರಿಯಾಝ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಖ್ಯಾತ ಕಲಾವಿದ ಪ್ರಶಸ್ತಿ ವಿಜೇತ ಶಿಕ್ಷಕ ಚೇತನ್ ಕೊಪ್ಪ ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮನುಷ್ಯ ಇತಿಹಾಸದಿಂದ ಪಾಠ ಕಲಿಯುವುದಿಲ್ಲ,ಇತಿಹಾಸ ಮನುಷ್ಯ ನಿಗೆ ಪಾಠ ಕಲಿಸುತ್ತದೆ.
ರಂಗಸ್ವರೂಪ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಇವತ್ತು ಸ್ವತಂತ್ರರಾಗಿ ರಾಜ್ಯದಾದ್ಯಂತ ಶಿಬಿರವನ್ನು ಸಂಯೋಜಿಸುತ್ತಿರುವುದು ರಂಗಸ್ವರೂಪದ ಯಶಸ್ಸಿನ ಮೆಟ್ಟಲುಗಳು ಎಂದು ಕರೆಕೊಟ್ಟರು.
ಯುವ ಉದ್ಯಮಿ ಸಾಕ್ಷತ್ ಶೆಟ್ಟಿ ಕಾವೂರು, ಮರಕಡ ಶಾಲಾ ಮುಖ್ಯೋಪಾಧ್ಯಾಯರಾದ ಗಣೇಶ್ ಕುಮಾರ್,ರಂಗ ಸ್ವರೂಪ ಕಾರ್ಯದರ್ಶಿ ಝುಬೇರ್ ಖಾನ್ ಕುಡ್ಲ, ಕಲಾವಿದ ನವೀನ್ ಅಡ್ಕರ್, ಶಾಲಾ ಶಿಕ್ಷಕಿ ಶೋಭಾ,ರೈಹಾನ್ ಮುಂತಾದವರು ಉಪಸ್ಥಿತರಿದ್ದರು.
ರಂಗ ಸ್ವರೂಪ ತಂಡದ ಹನೀಸಾ ಸವಾದ್ ಸ್ವಾಗತಿಸಿದರು,ತಸ್ಲೀಮಾ ಬಾನು ಧನ್ಯವಾದ ಗೈದರು,ರೆಹಮಾನ್ ಖಾನ್ ಕುಂಜತ್ತಬೈಲ್ ನಿರೂಪಿಸಿದರು.