ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಸಭೆ

ಬಂಟ್ವಾಳ: ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಯಾಗದಂತೆ ತಡೆದ ಮಹಿಳಾ ವಿರೋಧಿ ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಮಹಿಳಾ ಸಭೆ ಬಿಸಿರೋಡಿನ ಪ್ಲೈ ಓವರ್ ನ ಕೆಳಭಾಗದಲ್ಲಿ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ,ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡಿದೆ, ಆದರೆ ಮಹಿಳಾ ಮಸೂದೆ ಜಾರಿಯಾಗದಂತೆ ವಿರೋಧ ವ್ಯಕ್ತಪಡಿಸುವ ಕಾಂಗ್ರೆಸ್ ಜಿಲ್ಲೆಯಲ್ಲಿ ಎಷ್ಟು ಸೀಟು ನೀಡಿದೆ ಹೇಳಲಿ. ಅಂತವರು ಬಿಜೆಪಿಯ ಬಗ್ಗೆ ಪ್ರಶ್ನೆ ಮಾಡುವ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು. ಮಹಿಳಾ ಮೀಸಲಾತಿ ಜಾರಿ ಮಾಡುವ ಮೂಲಕ ಬದಲಾವಣೆ ಬಯಸಿದ ದೇಶದ ಜನರಿಗೆ ಕಾಂಗ್ರೇಸ್ ಬ ನಡೆ ಬೇಸರ ಮೂಡಿಸಿದೆ.
ಎಲ್ಲಾ ಪಕ್ಷಗಳು ಮಹಿಳೆಯರ ಪರ ಎಂಬ ಮಾತನ್ನು ಹೇಳುತ್ತಾರೆ,ಆದರೆ ಮಸೂದೆ ಜಾರಿಮಾಡಲು ಇದೇ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದಲ್ಲದೆ ಅಪಪ್ರಚಾರದಲ್ಲಿ ತೊಡಗಿದ್ದಾರೆ.


ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ವಿಶ್ವಾಸ ವಿಡಿ ಅವರು ಈ ಮಸೂದೆಯನ್ನು ಜಾರಿ ಮಾಡಿಯೇ ಮಾಡುತ್ತಾರೆ. ನಾರಿ ಶಕ್ತಿಗೆ, ಶಕ್ತಿಯನ್ನು ನೀಡುವ ಕೆಲಸ ಮಾಡಿಯೇ ಮಾಡುತ್ತಾರೆ ಹೀಗಾಗಿ ಮಹಿಳೆಯರು ವಿಶ್ವಾಸವನ್ನು ಕಳೆದು ಕೊಳ್ಳಬೇಡಿ ಎಂದು ಅವರು ತಿಳಿಸಿದರು.
ರಾಜ್ಯ ನಾಯಕಿ ಸುಲೋಚನ ಜಿ.ಕೆ.ಭಟ್, ಹಾಗೂ ಬಿಜೆಪಿ ಬಂಟ್ವಾಳ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್ ಅವರು ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಬಂಟ್ವಾಳ ಮಹಿಳಾ ಅಧ್ಯಕ್ಷೆ ಸವಿತಾ ಶೆಟ್ಟಿ, ಬಿಜೆಪಿ ಪ್ರಮುಖರಾದ ವಿಕಾಸ್ ಪುತ್ತೂರು, ತುಂಗಪ್ಪ ಬಂಗೇರ, ಶಿವಪ್ರಸಾದ್ ಶೆಟ್ಟಿ, ದಿನೇಶ್ ಭಂಡಾರಿ, ಗೋವಿಂದ ಪ್ರಭು, ದೇವಪ್ಪ ಪೂಜಾರಿ, ರಾಮ್ ದಾಸ ಬಂಟ್ವಾಳ, ಜನಾರ್ದನ ಬೊಂಡಾಲ,ಆನಂದ ಶಂಭೂರು,ತನಿಯಪ್ಪ ಗೌಡ, ಹರೀಶ್ ಶೆಟ್ಟಿ ಪಡು, ಜಿನರಾಜ ಕೋಟ್ಯಾನ್,ಪ್ರಣಾಮ್ ಅಜ್ಜಿಬೆಟ್ಟು, ಕಮಲಾಕ್ಷಿ ಪೂಜಾರಿ, ನಳಿನಿ ಶೆಟ್ಟಿ,ರೇಷ್ಮಾ ಶಂಕರಿ, ಸೀಮಾ ಮಾದವ,ಲಖಿತಾ ಆರ್ ಶೆಟ್ಟಿ, ಬಬಿತಾ ಆರ್ ಕೋಟ್ಯಾನ್, ಹರ್ಷಿಣಿಪುಷ್ಪಾನಂದ, ಮಂದಾರತಿ ಶೆಟ್ಟಿ, ಜಯಂತಿ , ಶ್ರೀಲತಾ, ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!