ಮೂಡಬಿದ್ರಿಯಲ್ಲಿ “ಡರ್ಟ್ ಫೆಸ್ಟ್ 2026” ಕಾರ್ ರೇಸಿಂಗ್ ಸ್ಪರ್ಧೆ ಮೇ 10ರಂದು

ಮೂಡಬಿದ್ರಿಯಲ್ಲಿ “ಡರ್ಟ್ ಫೆಸ್ಟ್ 2026” ಕಾರ್ ರೇಸಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ಎಂದು ಆಯೋಜಕರಾದ ಕೆಟಿಸಿ ನಝೀರ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟೀಮ್ ಡೈನಾಮಿಕ್ಸ್ ರೇಸಿಂಗ್ ವತಿಯಿಂದ ಮೇ 10ರಂದು ಮೂಡಬಿದ್ರಿಯ ಸ್ವರಾಜ್ ಮೈದಾನದ ಸಮೀಪದ ಫಾರ್ಚ್ಯೂನ್ ಗ್ರೌಂಡ್‌ನಲ್ಲಿ ಹೈ-ಎನರ್ಜಿ ಆಟೋಕ್ರಾಸ್ ಸ್ಪರ್ಧೆ ನಡೆಯಲಿದೆ ಎಂದರು.

ಈ ಸ್ಪರ್ಧೆಯ ಮೂಲಕ ನಿಪುಣ ಚಾಲಕರು, ಶಕ್ತಿಶಾಲಿ ವಾಹನಗಳು ಹಾಗೂ ಉತ್ಸಾಹಭರಿತ ಪ್ರದರ್ಶನವನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸುವ ಉದ್ದೇಶವಿದೆ. ಜೊತೆಗೆ ಗ್ರಾಮೀಣ ಮಟ್ಟದ ಮೋಟಾರ್ ಸ್ಪೋರ್ಟ್ಸ್‌ಗೆ ಉತ್ತೇಜನ ನೀಡುವುದು ಮತ್ತು ಚಾಲಕರು ಹಾಗೂ ಬ್ರಾಂಡ್‌ಗಳಿಗೆ ಉತ್ತಮ ವೇದಿಕೆ ಒದಗಿಸುವುದೂ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಪ್ರಮುಖ ವಿಶೇಷತೆಗಳನ್ನು ವಿವರಿಸಿದ ಅವರು, ವೃತ್ತಿಪರ ರೀತಿಯಲ್ಲಿ ವಿನ್ಯಾಸಗೊಳಿಸಿದ ಡರ್ಟ್ ಆಟೋಕ್ರಾಸ್ ಟ್ರ್ಯಾಕ್, ಪರಿಷ್ಕೃತ (Modified) ಹಾಗೂ ಸ್ಟಾಕ್ ಕಾರುಗಳಿಗೆ ವಿಭಿನ್ನ ವಿಭಾಗಗಳು ಇರಲಿವೆ ಎಂದರು. 60ರಿಂದ 100 ಚಾಲಕರು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, 500ರಿಂದ 800ಕ್ಕೂ ಹೆಚ್ಚು ರೇಸಿಂಗ್ ಅಭಿಮಾನಿಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಉತ್ಸಾಹಭರಿತ ರೇಸ್‌ಗಳು, ತೀವ್ರ ಸ್ಪರ್ಧೆ ಹಾಗೂ ಆಡ್‌ರೆನಲಿನ್ ತುಂಬಿದ ಅನುಭವ ಈ ಸ್ಪರ್ಧೆಯ ವಿಶೇಷ ಆಕರ್ಷಣೆಯಾಗಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ತಲ್ಹಾ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!