ಪಿಂಚಣಿ ವಿಳಂಬಕ್ಕೆ ಪುತ್ತೂರು ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

ಪುತ್ತೂರು: ರಾಜ್ಯದಾದಂತ್ಯ ವಿಕಲ ಚೇತನರಿಗೆ, ಮಲಗಿದ್ದಲೆ ಇರುವ ವಿಕಲಚೇತನರಿಗೆ ಎಂಡೊಪೀಡಿತ ವಿಕಲಚೇತನರಿಗೆ, ಹಿರಿಯ ನಾಗರಿಕರಿಗೆ ಮಾಶಾಸನ ಪಿಂಚಣಿ ಬಾರದೆ ಜೀವನ ನಿರ್ವಹಣೆ ಮಾಡಲು ತುಂಬಾ ಕಷ್ಟಕರ ವಾಗಿದೆ.ಈ ವಿಷಯದ ಬಗ್ಗೆ 6/5/26ರಂದು ಪುತ್ತೂರು ತಾಲ್ಲೂಕು ಪಂಚಾಯತ್ ಮಿನಿ ಸಭಾಂಗಣ ದಲ್ಲಿ ಪುತ್ತೂರು ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರಾದ ಶ್ರೀಮತಿ ತುಳಸಿ ಯವರ ಅಧ್ಯಕ್ಷ ತೆ ಯಲ್ಲಿ ನಡೆದ ವಿಕಲ ಚೇತನರ ಇಲಾಖೆ ಯಾಡಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತರ ಹಾಗೂ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಸಭೆಯಲ್ಲಿ ಎಂಡೊ ಪೀಡಿತರ ಪಿಂಚಣಿ /ವಿಕಲ ಚೇತನರ ಪಿಂಚಣಿ /ಹಿರಿಯ ನಾಗರಿಕರ ಪಿಂಚಣಿ 2ತಿಂಗಳಿಂದ ಬಾರದಿರುವ ಬಗ್ಗೆ ಪುತ್ತೂರು ತಹಸೀಲ್ದಾರ್ ರವರಿ ಗೆ ಮನವಿ ಸಲ್ಲಿಸುವ ಬಗ್ಗೆ ನಿರ್ಣಯ ಮಾಡಲಾಗಿತ್ತು.ದಿನಾಂಕ 7/5/26ರ ಗುರುವಾರ ದಂದು ಮದ್ಯಾಹ್ನ 12ಗಂಟೆಗೆ ಪುತ್ತೂರು ತಾಲ್ಲೂಕು ಆಡಳಿತ ಸೌದ ದಲ್ಲಿರುವ ಪುತ್ತೂರು ತಹಸೀಲ್ದಾರ್ ರವರ ಕಚೇರಿಗೆ ಭೇಟಿ ನೀಡಿ ಮಾನ್ಯ ನಿರ್ದೇಶಕರು ಸಾಮಾಜಿಕ ಭದ್ರತೆ ವಿಭಾಗ ಪಿಂಚಣಿ ಗಳ ನಿರ್ದೇಶನಾಲಯ ಬೆಂಗಳೂರು ಇವರಿಗೆ 2 ತಿಂಗಳಿಂದ ಬಾರದಿರುವ ಪಿಂಚಣಿ ಗಳ ಬಗ್ಗೆ ತಹಸೀಲ್ದಾರ್ ಕಚೇರಿ ಯಿಂದ ಮನವಿ ಮಾಡಲು ಬಗ್ಗೆ ಪುತ್ತೂರು ತಹಸೀಲ್ದಾರ್ ಎಸ್. ಬಿ ಕೊಡಲಾಗಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಪತ್ರ ಕೊಡಲೇ ಸ್ಪಂದಿಸಿದ ತಹಸೀಲ್ದಾರ್ ಎಸ್. ಬಿ ಕೊಡಲಾಗಿ ಯವ ರು 2 ತಿಂಗಳಿಂದ ಬಾರದಿರು ವ ಪಿಂಚಣಿ ಸಮಸ್ಯೆ ಯನ್ನು ಸಾಮಾಜಿಕ ಭದ್ರತ ವಿಭಾಗ ನಿರ್ದೇಶಕರು ಪತ್ರ ಬರೆಯತ್ತೇನೆ ಎಂದು ಭರವಸೆ ನೀಡಿದ್ದರು.ಈ ಸಂದರ್ಭದಲ್ಲಿ ಪುತ್ತೂರು ತಾಲ್ಲೂಕು ಪಂಚಾಯತ್ ವಿಕಲ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯ ಕರ್ತರಾದ ನವೀನ್ ಕುಮಾರ್, ಪುತ್ತೂರು ನಗರ ಸಭೆಯ ನಗರ ಪುನರ್ ವಸತಿ ಕಾರ್ಯ ಕರ್ತರಾದ ಭರತ್ ಕೆ, ಕಾರ್ತಿಕ್. ಬಿ ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಗ್ರಾಮೀಣ ಪುನರ್ ವಸತಿ ಕಾರ್ಯ ಕರ್ತರಾದ ಲೋಕೇಶ್.ಕೆ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!