ಉಡುಪಿ, ಜೂನ್ 4: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಉಡುಪಿಯ ಕಲಾವಿದ ಮಹೇಶ್ ಮರ್ಣೆ ಅವರು ವಿಶಿಷ್ಟ ಕಲಾಕೃತಿಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಮಹೇಶ್ ಮರ್ಣೆ ಅವರು ಅಶ್ವತ (ಅರಳಿ) ಎಲೆಯ ಮೇಲೆ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರವನ್ನು ಸೂಕ್ಷ್ಮವಾಗಿ ರಚಿಸಿ ಶುಭಾಶಯ ಕೋರಿದ್ದಾರೆ.
ಅತ್ಯಂತ ನಿಖರತೆ ಹಾಗೂ ಕಲಾತ್ಮಕ ಕೌಶಲ್ಯದಿಂದ ಮೂಡಿಬಂದಿರುವ ಈ ಭಾವಚಿತ್ರ ಸಾರ್ವಜನಿಕರ ಗಮನ ಸೆಳೆದಿದ್ದು, ನೂತನ ಮುಖ್ಯಮಂತ್ರಿಗೆ ಕಲಾತ್ಮಕವಾಗಿ ಸಲ್ಲಿಸಿದ ಅಭಿನಂದನೆಯಾಗಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜ್ಯದ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕಾಗಿ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ ಕರ್ನಾಟಕ ಮತ್ತಷ್ಟು ಪ್ರಗತಿ ಸಾಧಿಸಲಿ ಎಂಬ ಆಶಯವನ್ನು ಕಲಾವಿದ ಮಹೇಶ್ ಮರ್ಣೆ ವ್ಯಕ್ತಪಡಿಸಿದ್ದಾರೆ.
ಅಶ್ವತ ಎಲೆಯ ಮೇಲಿನ ಈ ವಿಶಿಷ್ಟ ಕಲಾಕೃತಿ ಅವರ ಸೃಜನಶೀಲತೆ ಮತ್ತು ಕಲಾಪ್ರತಿಭೆಗೆ ಮತ್ತೊಂದು ಉದಾಹರಣೆಯಾಗಿ ಗಮನ ಸೆಳೆದಿದೆ.