ವಾರೆಂಟ್ ಆರೋಪಿ ಬಂಧನ – ಬಂಟ್ವಾಳ ಪೊಲೀಸರ ಕಾರ್ಯಾಚರಣೆ

ಮಂಗಳೂರು: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರೆಂಟ್ ಅಸಾಮಿಯನ್ನು‌ ಬಂಟ್ವಾಳ ‌ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ:309/2017, ಕಲಂ 8 (c) 27 B NDPS ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರೆಂಟ್ ಅಸಾಮಿ ನಜಿರ್ ಅಹ್ಮದ್ (41) ಎಂಬಾತನ ಇರುವಿಕೆಯ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ PC 2456ನೇ ಶ್ರೀಕಾಂತ & PC 2468 ಅರುಣ್ ರವರು ಮಾಹಿತಿ ಸಂಗ್ರಹಿಸಿ, ಸದ್ರಿ ಆರೋಪಿಯನ್ನು ವಗ್ಗ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು‌ಪಡಿಸಿರುತ್ತಾರೆ. ಆರೋಪಿಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!