ಭೋವಿ ಜಾತಿ ಪ್ರಮಾಣ ಪತ್ರಕ್ಕೆ ವಲಸೆ ಪ್ರಮಾಣ ಪತ್ರ ಕಡ್ಡಾಯವಲ್ಲ: ಪವನ್ ಶಿರ್ವ

ಕರ್ನಾಟಕ ಅವಿಭಾಜ್ಯ ಜಿಲ್ಲೆಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 70,000 ಭೋವಿ ಜನಾಂಗದವರು ವಾಸವಾಗಿದ್ದು ಸುಮಾರು 7-8 ವರ್ಷಗಳಿಂದ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡದಿರುವುದು ಖಂಡನಿಯ ಎಂದು ಸಾಮಾಜಿಕ ಹೋರಾಟಗಾರ ಪವನ್ ಕುಮಾರ್ ಶಿರ್ವ ಆಕ್ರೋಶ ವ್ಯಕ್ತಪಡಿಸಿದರು.

ಭಾರತ ಸರ್ಕಾರದ ಅಧಿಸೂಚನೆ ಸಂಖ್ಯೆ BC12016/34/76-SCT-5 ರ ದಿನಾಂಕ 27-07-1997 ರಂದು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ 101 ಪರಿಶಿಷ್ಟ ಜಾತಿಗಳನ್ನು ನಮೋದಿಸಲಾಗಿದ್ದು ಕ್ರಮ ಸಂಖ್ಯೆ 23ರಲ್ಲಿ ಭೋವಿ ಜನಾಂಗವನ್ನು ನಮೂದಿಸಿದೆ ಎಂದು ಹೇಳಿದರು.. ಇಂದಿನ ಸಂಸತ್ತಿನಲ್ಲಿ ಭೋವಿ ಜಾತಿಯನ್ನು ಪರಿಶಿಷ್ಟ ಜಾತಿ ಎಂದು ಸೇರಿಸಿ ರಾಷ್ಟ್ರಪತಿಯವರು ಅಂಕಿತ ಕೂಡ ಮಾಡಿದ್ದಾರೆ..

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೋವಿ ಜಾತಿ ಪ್ರಮಾಣವತ್ರಕ್ಕೆ ಅರ್ಜಿ ಸಲ್ಲಿಸಿದರೆ ಇಲ್ಲಸಲ್ಲದ ದಾಖಲೆಯನ್ನು ಕೇಳಿ ಅರ್ಜಿಯನ್ನು ತಿರಸ್ಕೃತ ಮಾಡುತ್ತಾರೆ.. ಮತ್ತು ವಲಸೆ ಪ್ರಮಾಣ ಪತ್ರ ಕಡ್ಡಾಯ ಎಂದು ಹೇಳುತ್ತಾರೆ.. ಆದರೆ ವಲಸೆ ಪ್ರಮಾಣ ಪತ್ರ ಕಡ್ಡಾಯ ಎಂದು ಯಾವುದೇ ಸರ್ಕಾರ ಅಥವಾ ಹೈಕೋರ್ಟ್ ಹೇಳಿಲ್ಲ ಎಂದು ಪವನ್ ಕುಮಾರ್ ಶಿರ್ವ ಆರೋಪಿಸಿದರು..

ಅಧಿಕಾರಿಗಳ ನಿರ್ಲಕ್ಷ್ಯದಿಂದ ತಂದೆ ಮತ್ತು ಮಕ್ಕಳಿಗೆ ಬೇರೆ ಬೇರೆ ಜಾತಿ ಪ್ರಮಾಣ ಪತ್ರ ನೀಡುತ್ತಿರುವುದು ಖಂಡನೀಯ.. ತಂದೆಗೆ ಪರಿಶಿಷ್ಟ ಜಾತಿಯಲ್ಲಿ ನೀಡಿದರೆ ಮಕ್ಕಳಿಗೆ ಪ್ರವರ್ಗ -1 ಜಾತಿಯಲ್ಲಿ ಪ್ರಮಾಣ ಪತ್ರ ನೀಡುವುದು ಸರಿಯಲ್ಲ.. ತಾವೇ ಸಂವಿಧಾನ ರಚಿಸಿದ ರೀತಿಯಲ್ಲಿ ತಮಗಿಷ್ಟ ಬಂದ ರೀತಿಯಲ್ಲಿ ಜಾತಿ ನಮೂದಿಸುವುದು ಅಪರಾಧ ಎಂದರು.. ಈ ಸಮಸ್ಯೆಯಿಂದಾಗಿ ಬಡವರು ಕಂಗಳಾಗಿದ್ದು ಮುಂದಿನ ದಿನ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.. ಈಗಾಗಲೇ ಹೈಕೋರ್ಟಿಗೆ ರಿಟರ್ಜಿ ಸಲ್ಲಿಸಿದ್ದು ಅದಕ್ಕೂ ಅಧಿಕಾರಿಗಳು ನೀಡದಿದ್ದರೆ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗುವುದು ಹಾಗೂ ಪ್ರತಿ ಗ್ರಾಮ ಪಂಚಾಯತ್, ತಾಸಿಲ್ದಾರ್ ಕಚೇರಿ ಎದುರು ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋ ರಾತ್ರಿ ಪ್ರತಿಭಟನೆ ಮಾಡಲಾಗುವುದು ಎಂದು ಪವನ್ ಕುಮಾರ್ ಶಿರ್ವ ಎಚ್ಚರಿಸಿದರು.. ಪ್ರತಿಭಟನೆ ಸಂದರ್ಭದಲ್ಲಿ ನಮಗೆ ಪರಿಹರ ಸಿಗುವವರೆಗೂ ಪ್ರತಿಭಟನೆಯನ್ನು ನಿಲ್ಲಿಸಲಾಗುವುದಿಲ್ಲ ಎಂದು ಭೋವಿ ಸಮಾಜದ ಸಾಮಾಜಿಕ ಹೋರಾಟಗಾರ ಪವನ್ ಕುಮಾರ್ ಶಿರ್ವ ಎಚ್ಚರಿಕೆ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!