ಕುಂಬಳೆಯಲ್ಲಿ ಪ್ರಪ್ರಥಮ ಬಾರಿಗೆ ‘ಹಲಸು ಮತ್ತು ಸ್ವದೇಶಿ ಖಾದ್ಯ ಮೇಳ’: ನಾಲಿಗೆಗೆ ರುಚಿ, ಸ್ವಉದ್ಯಮಕ್ಕೆ ಬೆಂಬಲ!

ಕುಂಬಳೆ: ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಹಾಗೂ ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಶ್ರೀ ರಾಜರಾಜೇಶ್ವರಿ ಇವೆಂಟ್ಸ್ ಅವರ ನೇತೃತ್ವದಲ್ಲಿ ಕುಂಬಳೆಯಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ‘ಹಲಸು ಮತ್ತು ಸ್ವದೇಶಿ ಖಾದ್ಯ ಮೇಳ’ವನ್ನು ಆಯೋಜಿಸಲಾಗಿದೆ.
ಸ್ವಉದ್ಯಮಕ್ಕೆ ಪ್ರೋತ್ಸಾಹ ನೀಡಲು ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಈ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಗೆ ವೈವಿಧ್ಯಮಯ ಖಾದ್ಯಗಳ ರುಚಿ ಸವಿಯುವ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಉತ್ತಮ ಅವಕಾಶ ಸಿಗಲಿದೆ.


ಈ ಆಯೋಜನಾ ಸಮಿತಿಯಲ್ಲಿ ಅಶ್ವಿನಿ, ಗಣೇಶ್, ಸುಮಾ ಹಾಗೂ ಮಹದೇವ ಸ್ವಾಮಿ ಮುಂತಾದವರು ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೇಳದ ಪ್ರಮುಖ ಆಕರ್ಷಣೆಗಳು:
ಹಲಸಿನ ವಿಶಿಷ್ಟ ರುಚಿ: ಹಲಸಿನ ಹೋಳಿಗೆ, ಹಲಸಿನ ಜಿಲೇಬಿ, ಹಲಸಿನ ಐಸ್‌ಕ್ರೀಮ್ ಮತ್ತು ಹಲಸಿನ ಜ್ಯೂಸ್ ಮುಂತಾದ ನಾಲಿಗೆಗೆ ತಣಿವೂಡಿಸುವ ವೈವಿಧ್ಯಮಯ ಹಲಸಿನ ಖಾದ್ಯಗಳು.


ವಿವಿಧ ಜಿಲ್ಲೆಗಳ ತಿಂಡಿ-ತಿನಿಸುಗಳು: ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಮಳಿಗೆಗಳಲ್ಲಿ ಸಿಗುವ ವಿಶಿಷ್ಟ ಶೈಲಿಯ ತಿಂಡಿ-ತಿನಿಸುಗಳು.
ಸ್ವದೇಶಿ ಮಸಾಲೆ ಹಾಗೂ ವಸ್ತುಗಳು: ಸ್ವದೇಶಿ ಮಸಾಲೆ ಪದಾರ್ಥಗಳು, ಕೈಮಗ್ಗ ಸೀರೆಗಳು, ಕರಕುಶಲ ವಸ್ತುಗಳು ಹಾಗೂ ಗೃಹೋಪಯೋಗಿ ವಸ್ತುಗಳ ಬೃಹತ್ ಸಂಗ್ರಹ.
ವಿಶೇಷ ಸ್ಟಾಲ್‌ಗಳು: ಸ್ಥಳೀಯ ಉದ್ಯಮಿಗಳು ತಯಾರಿಸಿದ ದಿನಬಳಕೆಯ ಹಲವು ಅಪರೂಪದ ಉತ್ಪನ್ನಗಳ ಮಳಿಗೆಗಳು.
ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ, ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸ್ಥಳೀಯ ಉದ್ಯಮಿಗಳಿಗೆ ಬೆಂಬಲ ನೀಡಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!