ಸೆ.13ರಂದು ತುಂಬೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ತುಂಬೆ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಆಶ್ರಯದಲ್ಲಿ ಹಾಗೂ ತುಂಬೆ ಗ್ರೂಪ್ ಅಜ್ಜಾನ್ ಯುಎಇ ಸಂಸ್ಥಾಪಕ ಡಾ. ತುಂಬೆ ಮೊಯ್ದಿನ್ ಅವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೆ.13ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ತುಂಬೆ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ನುರಿತ ವೈದ್ಯರ ನೇತೃತ್ವದಲ್ಲಿ ಕಣ್ಣಿನ ಹಾಗೂ ಸ್ತ್ರೀರೋಗ ತಪಾಸಣೆ, ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಸಾಮಾನ್ಯ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು. ಅಗತ್ಯವಿರುವವರಿಗೆ ಉಚಿತ ಔಷಧಿಯನ್ನೂ ವಿತರಿಸಲಾಗುವುದು.

ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರಿಗೆ ಉಚಿತ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು. ಶಿಬಿರಕ್ಕೆ ಆಗಮಿಸುವವರಿಗಾಗಿ ತುಂಬೆ ಜಂಕ್ಷನ್ ಹಾಗೂ ಫರಂಗಿಪೇಟೆಯಿಂದ ಬೆಳಿಗ್ಗೆ 10.30 ಮತ್ತು 11.30ಕ್ಕೆ ಉಚಿತ ವಾಹನ (ಬಿ.ಎ. ಶಾಲಾ ಬಸ್) ಸೌಲಭ್ಯವಿರಲಿದೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.

SHARE
Loading spinner

3 thoughts on “ಸೆ.13ರಂದು ತುಂಬೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

  1. 678winvip feels a bit more exclusive. The website is pretty clean, and I’ve heard whispers about some decent VIP perks. Maybe worth a look if that’s your thing! Find it here: 678winvip

    Loading spinner

Leave a Reply

Your email address will not be published. Required fields are marked *

error: Content is protected !!