ಕೆನರಾ ಅಸೋಸಿಯೇಷನ್ (ರಿ) ಇಲೆಕ್ಟ್ರಾನಿಕ್ ಸಿಟಿ ಬೆಂಗಳೂರು ಇವರ ಆಶ್ರಯದಲ್ಲಿ-ಆಟಿಡೊಂಜಿ ಕೂಟ

ಕೆನರಾ ಅಸೋಸಿಯೇಷನ್ (ರಿ) ಇಲೆಕ್ಟ್ರಾನಿಕ್ ಸಿಟಿ ಬೆಂಗಳೂರು ಇವರ ಆಶ್ರಯದಲ್ಲಿ 26 ಜೂಲೈ 2025 ರಂದು ಅಮೃತಾಮಯ ಹಾಲ್ ಅನಂತನಗರ ದಲ್ಲಿ ಆಟಿಡೊಂಜಿ ಕೂಟ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಕುಮಾರಿ ದೀಪಾಶ್ರೀ ಪ್ರಾರ್ಥನೆ ಯಿಂದ ಪ್ರಾರಂಭಿಸಿ, ದೀಪ ಬೆಳಗಿಸುವ ಮೂಲಕ ಸಂಘದ ಹಿರಿಯ ಸದಸ್ಯರಾದ ಶ್ರೀ ಪದ್ಮನಾಭ ಶೆಟ್ಟಿ ಯವರು ಉದ್ಘಾಟನೆ ಮಾಡಿದರು. ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಸುವರ್ಣ ರವರು ಸ್ವಾಗತ ಭಾಷಣ ದ ಜೊತೆಗೆ ಸಂಘವು ಏರ್ಪಡಿಸುವ ಈ ವರುಷದ ಕಾರ್ಯಕ್ರಮದ ಬಗ್ಗೆ ವಿವರಿಸಿ ಮತ್ತು ಕಳೆದ ಸರದಿಯ ವಾರ್ಷಿಕ ಲೆಕ್ಕಾಚಾರ ವನ್ನು ಮಂಡಿಸಿದರು.ತದ ನಂತರ ಸಂಘದ ಉಪಾಧ್ಯಕ್ಷರಾದ ಶ್ರೀ ವಿಜಯ್ ಕುಲಾಲ್ ಆಟಿ ಅಮಾವಾಸ್ಯೆ, ಆಟಿ ತಿಂಗಳಿನ ವಿಶೇಷತೆ, ಆಟಿ ತಿಂಗಳಿನ ಆಹಾರಗಳ ಮಹತ್ವ ಹಾಗೂ ಅದರ ಉಪಯೋಗ ದ ಬಗ್ಗೆ ಮಾತನಾಡಿ ವಿವರಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ನವೀನ್ ಶೆಟ್ಟಿ ಉಪಸ್ಥಿತರಿದ್ದರು. ಡಾಕ್ಟರ್ ಶ್ರೀನಾಥ್ ಎಸ್. ಮಣಿಕಂಟಿ – ಮಕ್ಕಳತಜ್ಞರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಮಕ್ಕಳ ಆರೋಗ್ಯವನ್ನು ಕಾಪಾಡಲು ಸಲಹೆ, ಸೂಚನೆ ತಿಳಿಸಿದರು. ಮಕ್ಕಳಿಗಾಗಿ ಕೃಷ್ಣ,ರಾಧೆ ಮತ್ತು ತುಳು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು, ಆಟಿದ ವನಸ್ ಸಂಘದ ಮಹಿಳಾ ಸದಸ್ಯೆಯರ ಸಹಕಾರದಿಂದ ನೆರವೇರಿತು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಮೋಹನ್ ದಾಸ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಸಂಘಟನಾ ಕಾರ್ಯದರ್ಶಿ ಶ್ರೀ ಯೋಗೀಶ್ ದೇರಾಜೆ, ನೂತನ ಖಜಾಂಜಿ ಶ್ರೀ ಯಶವಂತ್ ,ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ವಸಂತ್ ಪೂಜಾರಿ, ಮಮತಾ ಲೋಕೇಶ್, ಶ್ರೀ ಸುಭಾಸ್ ಕಾರ್ಯಕ್ರಮ ಕ್ಕೆ ಸಹಕರಿಸಿದರು.ಕರಾವಳಿಯ ಆಟೋಟ ಮುಂಕ್ ಬೀಜ, ಕರ ದರ್ಪಿನಿ ಮುಂತಾದ ಆಟ ಗಳನ್ನು ಸೇರಿದ ಎಲ್ಲಾ ಸದಸ್ಯರು ಕುಟುಂಬ ದ ಜೊತೆಗೆ ಆಡಿ ಸಂಭ್ರಮಿಸಿದರು. ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಶ್ವೇತಾ ಹೆಗ್ಡೆ ಕಾರ್ಯಕ್ರಮ ವನ್ನು ಬಹಳ ಸುಂದರವಾಗಿ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!