ಇನ್ನು ಮೊಬೈಲ್ ಸಂಖ್ಯೆ ಬೇಡ; ವಾಟ್ಸ್ಆಪ್‌ಗೆ ಯೂಸರ್‌ನೇಮ್‌ ಸೌಲಭ್ಯ

ವಾಟ್ಸ್ಆಪ್‌ನಲ್ಲಿ ಇಷ್ಟದ ಯೂಸರ್‌ನೇಮ್‌ನ್ನು ಈಗಲೇ ಕಾಯ್ದಿರಿಸಿ; ಇಲ್ಲದಿದ್ದರೆ ಬೇರೆಯವರು ಪಡೆದುಕೊಳ್ಳಬಹುದು! ಶೀಘ್ರದಲ್ಲೇ ಯೂಸರ್‌ನೇಮ್‌ ಸೌಲಭ್ಯ, ಇನ್ನು ಮೊಬೈಲ್ ಸಂಖ್ಯೆ ಹಂಚಿಕೊಳ್ಳದೇ ಚಾಟ್ ಮಾಡಲು ಅವಕಾಶ.ಇನ್ನು ಮೊಬೈಲ್ ಸಂಖ್ಯೆ ಬೇಡ! ವಾಟ್ಸ್ಆಪ್‌ಗೆ ಬರುತ್ತಿದೆ ಯೂಸರ್‌ನೇಮ್‌ ಸೌಲಭ್ಯ

“ನಿಮ್ಮ ವಾಟ್ಸ್ಆಪ್‌ ನಂಬರ್ ಕೊಡುತ್ತೀರಾ?” ಎಂಬ ಪ್ರಶ್ನೆಯ ದಿನಗಳು ಇನ್ನು ಮುಗಿಯಲಿವೆಯೇ? ವಾಟ್ಸ್ಆಪ್‌ ಪರಿಚಯಿಸಲು ಸಜ್ಜಾಗಿರುವ ಹೊಸ ಯೂಸರ್‌ನೇಮ್ (ಬಳಕೆದಾರ ಹೆಸರು) ಸೌಲಭ್ಯದ ಬಗ್ಗೆ ಹರಿದಾಡುತ್ತಿರುವ ವರದಿಗಳು ಈ ಪ್ರಶ್ನೆಯನ್ನು ಹುಟ್ಟುಹಾಕಿವೆ.
ಇನ್ನು ಮುಂದೆ ಮೊಬೈಲ್‌ ಸಂಖ್ಯೆಯನ್ನು ಪರಸ್ಪರ ಹಂಚಿಕೊಳ್ಳದೆ, ಯೂಸರ್‌ನೇಮ್‌ ಮೂಲಕವೇ ವಾಟ್ಸ್ಆಪ್‌ನಲ್ಲಿ ಚಾಟ್‌ ನಡೆಸಲು ಅವಕಾಶ ದೊರೆಯಲಿದೆ.

ಅಂದರೆ, ಫೋನ್‌ ಸಂಖ್ಯೆಯ ಬದಲಿಗೆ ಬಳಕೆದಾರರ ಗುರುತಾಗಿ ಯೂಸರ್‌ನೇಮ್‌ ಕಾರ್ಯನಿರ್ವಹಿಸಲಿದೆ. ಈ ಹೊಸ ವೈಶಿಷ್ಟ್ಯವು ಮುಂದಿನ ಕೆಲವು ತಿಂಗಳಲ್ಲಿ ಎಲ್ಲರಿಗೂ ಲಭ್ಯವಾಗುವ ನಿರೀಕ್ಷೆಯಿದೆ.
ತಮಗೆ ಇಷ್ಟವಾದ ಯೂಸರ್‌ನೇಮ್‌ನ್ನು ಮುಂಚಿತವಾಗಿಯೇ ಕಾಯ್ದಿರಿಸಿಕೊಳ್ಳುವ (Reserve) ಅವಕಾಶವನ್ನೂ ವಾಟ್ಸ್ಆಪ್‌ ನೀಡಲಿದೆ ಎಂದು ಕಂಪನಿ ತಿಳಿಸಿದೆ.

ಕ್ಲಬ್‌ ಸದಸ್ಯರು, ನೆರೆಹೊರೆಯವರ ಗುಂಪುಗಳು, ವ್ಯವಹಾರ ಸಂಬಂಧಿತ ಸಂಪರ್ಕಗಳು ಸೇರಿದಂತೆ ಮೊಬೈಲ್‌ ಸಂಖ್ಯೆ ಹಂಚಿಕೊಳ್ಳಲು ಇಚ್ಛಿಸದಿದ್ದರೂ ಸಂಪರ್ಕದಲ್ಲಿರಬೇಕಾದವರೊಂದಿಗೆ ಸುರಕ್ಷಿತವಾಗಿ ಸಂಭಾಷಣೆ ನಡೆಸಲು ಈ ವೈಶಿಷ್ಟ್ಯ ನೆರವಾಗಲಿದೆ.
ಯೂಸರ್‌ನೇಮ್‌ ಕಾಯ್ದಿರಿಸಲು ಸೆಟ್ಟಿಂಗ್ಸ್ → ಅಕೌಂಟ್ → ಯೂಸರ್‌ನೇಮ್ ಆಯ್ಕೆಗೆ ತೆರಳಿ ತಮಗೆ ಬೇಕಾದ ಹೆಸರನ್ನು ನೋಂದಾಯಿಸಬಹುದು.
ಇದರೊಂದಿಗೆ ವಾಟ್ಸ್ಆಪ್‌ನಲ್ಲಿ ಇನ್ನೂ ಹಲವು ಗೌಪ್ಯತಾ (Privacy) ವೈಶಿಷ್ಟ್ಯಗಳೂ ಸೇರ್ಪಡೆಯಾಗುವ ಸಾಧ್ಯತೆ ಇದೆ. ಚಾಟ್‌ ಲಾಕ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು, ಸ್ವಯಂ ಅಳಿದುಹೋಗುವ ಸಂದೇಶಗಳು (Disappearing Messages) ಹಾಗೂ ಪಾಸ್‌ಕಿ (Passkey) ಬೆಂಬಲ ಸೇರಿದಂತೆ ಹಲವು ಹೊಸ ಸುಧಾರಣೆಗಳು ಬರಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!