HPCLನಿಂದ ನಾಲ್ವರು ಮಹಿಳಾ ಕಾರ್ಮಿಕರ ವಜಾ ಆರೋಪ: DYFI ಬೆಂಬಲ

HPCL ನಿಂದ ನಿಯಮ ಬಾಹಿರವಾಗಿ ಹೊರದಬ್ಬಿಸಿಕೊಂಡಿರುವ ಕನ್ನಡಿಗ ಮಹಿಳಾ ಗುತ್ತಿಗೆ ಕಾರ್ಮಿಕರ‌ ಪ್ರತಿಭಟನೆಗೆ DYFI ಸುರತ್ಕಲ್ ಘಟಕ ಬೆಂಬಲ ವ್ಯಕ್ತಪಡಿಸಿದೆ.


HPCL ನಲ್ಲಿ ಕಳೆದ 15 ವರ್ಷಗಳ ಕಾಲ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದ ನಾಲಕ್ಕು ಮಹಿಳಾ ಕಾರ್ಮಿಕರನ್ನು ಏಕಾಏಕಿ ಕಂಪೆನಿ ಕೆಲಸದಿಂದ ಕಿತ್ತು ಹಾಕಿದೆ. ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿರುವ ಮಹಿಳಾ ಕಾರ್ಮಿಕರು ಸೆಪ್ಟೆಂಬರ್ 1 ರಿಂದ ಕಂಪೆನಿ ಮುಂಭಾಗ ಧರಣಿ ನಡೆಸುತ್ತಿದ್ದಾರೆ. ಸಿಐಟಿಯು ಹಾಗು ನಾಗರಿಕ ಹೋರಾಟ ಸಮಿತಿ, ಸುರತ್ಕಲ್ ಈ ಬಡ ಮಹಿಳಾ ಕಾರ್ಮಿಕರಿಗೆ ಧೈರ್ಯ ತುಂಬಿ ಸಾಥ್ ನೀಡಿದೆ.
ಇಂದು ಧರಣಿ ನಿರತ ಮಹಿಳಾ ಕಾರ್ಮಿಕರನ್ನು ಡಿವೈಎಫ್ಐ ಸುರತ್ಕಲ್ ಘಟಕದ ಪ್ರಮುಖರು ಭೇಟಿಯಾಗಿ ಬೆಂಬಲ ವ್ಯಕ್ತಪಡಿಸಿದರು.
ಈ ನಿಯೋಗದಲ್ಲಿ ಶ್ರೀನಾಥ್ ಕುಲಾಲ್, ಮಕ್ಸೂದ್ ಬಿ ಕೆ, ಅಜ್ಮಾಲ್ ಕಾನ, ಇಮ್ತಿಯಾಜ್ ಕುಳಾಯಿ, ಬಶೀರ್ ಫಿಟ್ಟರ್, ಮಯ್ಯದ್ದಿ ಕುಳಾಯಿ, ಐ ಮಹಮ್ಮದ್, ಖಾಲಿದ್ ಕೃಷ್ಣಾಪುರ ಇದ್ದರು.


ಮೊನ್ನೆಯಷ್ಟೇ ಪ್ರತಿಭಟನೆ ವೇಳೆ ಮನವಿ ಪತ್ರ ಸ್ವೀಕರಿಸಲು ಬಾರದೆ HPCL ಅಧಿಕಾರಿಗಳ ದರ್ಪ ತೋರಿದ್ದಾರೆ ಎಂದು ರೊಚ್ಚಿಗೆದ್ದ ಕಾರ್ಮಿಕ ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ 7 ದಿನಗಳ ಒಳಗಾಗಿ ಸಮಸ್ಯೆಯನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ಬೃಹತ್ ಹೋರಾಟದ ಎಚ್ಚರಿಕೆಯನ್ನು ಹೋರಾಟಗಾರ ಮುನೀರ್ ಕಾಟಿಪಳ್ಳ ನೀಡಿದ್ದರು.
ಮೂರುವರೆ ತಾಸುಗಳ ನಿರಂತರ ಪ್ರಯತ್ನ, ಪ್ರತಿಭಟನೆ, ಸುರತ್ಕಲ್ ಠಾಣೆಯ ಪೊಲೀಸರ ಮದ್ಯಪ್ರವೇಶದ ತರುವಾಯ HPCL ಅಧಿಕಾರಿಗಳು ಮನವಿ ಸ್ವೀಕರಿಸಿದ್ದರು‌.

SHARE
Loading spinner

One thought on “HPCLನಿಂದ ನಾಲ್ವರು ಮಹಿಳಾ ಕಾರ್ಮಿಕರ ವಜಾ ಆರೋಪ: DYFI ಬೆಂಬಲ”

Leave a Reply

Your email address will not be published. Required fields are marked *

error: Content is protected !!