“ಗೋಮಾತೆಯ ಗೌರವದ ಅಭಿಯಾನದ ಆಹ್ವಾನ” ಪೂರ್ವಭಾವಿ ಸಭೆ : ಬೆಳ್ತಂಗಡಿ ತಾಲೂಕು ಸಮಿತಿ ರಚನೆ

ಉಜಿರೆ: ಇಲ್ಲಿನ ಶಾರದಾ ಮಂಟಪದಲ್ಲಿ ಗೋಮಾತೆಯ ಸಂರಕ್ಷಣೆ ಮತ್ತು ಮಹತ್ವದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರದ ಸಾಧು ಸಂತರ ಸೇವೆ ಮತ್ತು ಸಹಕಾರದಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ಬೆಳ್ತಂಗಡಿ ತಾಲೂಕಿನ ಸಮಿತಿಯನ್ನು ರಚಿಸಿ ಕಾರ್ಯಕ್ಕೆ ವೇಗ ಕೊಡುವ ನಿಟ್ಟಿನಲ್ಲಿ ಸಭೆಯನ್ನು ನಡೆಸಲಾಯಿತು.


ಸಭೆಯಲ್ಲಿ ಗೋ ಸೇವಾ ಗತಿವಿಧಿಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರವೀಣ್ ಸರಳಾಯ ಅವರು ದೇಶವ್ಯಾಪಿ ನಡೆಯುತ್ತಿರುವ ಅಭಿಯಾನದ ಬಗ್ಗೆ ಹಾಗೂ ದೇಶೀಯ ಗೋವಿನ ಮಹತ್ವನ್ನು ಸವಿಸ್ತಾರವಾಗಿ ತಿಳಿಸಿದರು ಹಾಗೂ ದ.ಕ. ಜಿಲ್ಲಾ ಸಹ ಪ್ರಭಾರಿ ಅಶೋಕ್ ಇಳಂತಿಲ ಅವರು ಸಭೆಯ ಉದ್ದೇಶದ ಕುರಿತು ಮಾಹಿತಿ ನೀಡಿದರು.


ಅಭಿಯಾನದ ಮೂರನೇ ಹಂತದ ‘ಗೋ ಗೌರವ ಆಹ್ವಾನ’ ಸಹಿ ಸಂಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಬಗ್ಗೆ ಹಾಗೂ ಬೆಳ್ತಂಗಡಿ ತಾಲೂಕಿನ ಪ್ರತೀ ಗ್ರಾಮದಲ್ಲಿ ಸಮಿತಿ ರಚನೆ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಸಂಘಚಾಲಕರಾದ ಶ್ರೀಗಣೇಶ ಕಾಂತಾಜೆ, ಘುಮಂತು ಕಾರ್ಯ ಗತಿವಿಧಿ ಯ ಪ್ರಾಂತ ಟೋಲಿ ಸದಸ್ಯ ಲಕ್ಷ್ಮಣ ದಾಸ್,ಘುಮಂತು ಕಾರ್ಯ ಮಂಗಳೂರು ವಿಭಾಗ ಸಂಯೋಜಕ ಸುದರ್ಶನ ಕನ್ಯಾಡಿ ಉಪಸ್ಥಿತರಿದ್ದರು.


ಆಯ್ಕೆಯಾದ ತಾಲೂಕು ಸಮಿತಿಯ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ:
ತಾಲೂಕು ಪ್ರಭಾರಿ: ಕಿರಣ್ ಚಂದ್ರ ಪುಷ್ಪಗಿರಿ
ತಾಲೂಕು ಸಂಯೋಜಕ: ಕೇಶವ ಬಂಗೇರ
ಸಹ ಪ್ರಭಾರಿ: ದಿನೇಶ್ ಚಾರ್ಮಾಡಿ
ಸಹ ಸಂಯೋಜಕರು: ದೀಕ್ಷಿತ್ ಕಡಿರುದ್ಯಾವರ
ರಮೇಶ್ ಧರ್ಮಸ್ಥಳ
ಸಂತ ಪ್ರಭಾರಿ: ಭಾಸ್ಕರ್ ಧರ್ಮಸ್ಥಳ
ಸಹಿ ಸಂಗ್ರಹ ಪ್ರಭಾರಿ: ಪ್ರಮೋದ್ ದಿಡುಪೆ
ಗ್ರಾಮ ಸಮಿತಿ ಪ್ರಭಾರಿ: ಗೌರವ್ ಶೆಟ್ಟಿ
ಸಾಮಾಜಿಕ ಜಾಲತಾಣ: ಮಾನೀತ್ ,ಜಿತೇಶ್,
ವ್ಯವಸ್ಥೆ ಪ್ರಭಾರಿ: ಬಾಲಚಂದ್ರ ನೀರಚಿಲುಮೆ
“ಗೋಮಾತೆಯ ಗೌರವ – ನಮ್ಮ ಸಂಸ್ಕೃತಿಯ ಹೆಮ್ಮೆ!” ಎಂಬ ಆಶಯದೊಂದಿಗೆ ಸಭೆಯು ಸಂಪನ್ನಗೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!