ರಾಜ್ಯಾದ್ಯಂತ 45 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಕ್ಕೆ ದಾಳಿ ಪರಿಶೀಲನೆ

ಆರೋಗ್ಯ ಸಚಿವ ಯುಟಿ ಖಾದರ್ ಆದೇಶದ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವಿಭಾಗದಿಂದ ರಾಜ್ಯಾದ್ಯಂತ 45 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳಲ್ಲಿ ವಿಶೇಷ ತಪಾಸಣೆ ನಡೆಸಿದ್ದಾರೆ.

ಈ ತಪಾಸಣೆಯಲ್ಲಿ 32 ನೀರಿನ ಮಾದರಿಗಳನ್ನು ಸಂಗ್ರಹಿಸಿ, ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಹಲವು ಘಟಕಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ಸಿಬ್ಬಂದಿಗೆ ವೈದ್ಯಕೀಯ ಪ್ರಮಾಣಪತ್ರ ಇಲ್ಲದಿರುವುದು, ಲೇಬಲ್‌ನಲ್ಲಿ ತಪ್ಪುಗಳು ಮತ್ತು ಕೀಟ ನಿಯಂತ್ರಣ ಪ್ರಮಾಣಪತ್ರ ಇಲ್ಲದಿರುವುದು ಪತ್ತೆಯಾಗಿದೆ. 24 ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಮೈಸೂರು ಮತ್ತು ದಾವಣಗೆರೆಯ 3 ಘಟಕಗಳಲ್ಲಿ ತಪ್ಪು ಲೇಬಲ್ ಇರುವ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಅಸ್ವಚ್ಛ ಸ್ಥಿತಿಯಲ್ಲಿದ್ದ ಒಂದು ಘಟಕವನ್ನು ಮುಚ್ಚಿಸಲಾಗಿದೆ.

ಕುಡಿಯುವ ನೀರಿನ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಜನರ ಆರೋಗ್ಯದ ಜೊತೆ ಆಟವಾಡುವವರು ಎಷ್ಟೇ ದೊಡ್ಡವರಾಗಿರಲಿ, ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇಂತಹ ತಪಾಸಣೆಗಳು ಮುಂದೆಯೂ ನಿರಂತರವಾಗಿ ನಡೆಯಲಿವೆ.

ಸಾರ್ವಜನಿಕರಲ್ಲಿ ಮನವಿ ,ಪ್ಯಾಕೇಜ್ಡ್ ನೀರು ಖರೀದಿಸುವಾಗ ಬಾಟಲಿಯ ಮೇಲೆ FSSAI ಪರವಾನಗಿ ಸಂಖ್ಯೆ, ISI ಗುರುತು, ತಯಾರಿಕಾ ದಿನಾಂಕ ಮತ್ತು ಸೀಲ್ ಸರಿಯಾಗಿದೆಯೇ ಎಂದು ಪರಿಶೀಲಿಸಿ. ಸಂಶಯ ಬಂದರೆ ಆಹಾರ ಸುರಕ್ಷತೆ ಇಲಾಖೆಗೆ ತಿಳಿಸಿ ಎಂದು ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!