ನಿಟ್ಟೆ ಗ್ರಾಮದಲ್ಲಿ ಶ್ರೀ ಗಂಧದ ಮರ ಕಳವು ಪ್ರಕರಣ – ಸೊತ್ತು ಸಹಿತ ಮೂವರ ಅಂಧರ್

ಕಾರ್ಕಳ : ಜೂನ್ 16ರಂದು ರಾತ್ರಿ ಸಮಯ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಟ್ಟೆ ಗ್ರಾಮದ ದಿನೇಶ್ ಶೆಟ್ಟಿಗಾರ್ ತೋಟದಲ್ಲಿದ್ದ ಶ್ರೀಗಂಧದ ಮರವನ್ನು ಕಳವು ಮಾಡಿರುವ ಕೇಸ್ ಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಹೇನೊಟ್ಟುವಿನ ದಿನೇಶ್ ಶೆಟ್ಟಿಗಾರ್ ಎಂಬುವವರಿಗೆ ಸೇರಿದ್ದ 4 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರಗಳನ್ನು ಕಳವು ಗೈದಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೂ.17ರಂದು ಪ್ರಕರಣ ದಾಖಲಾಗಿತ್ತು.

ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್. ಮತ್ತು ಸುಂದರ್ ಅವರ ತಂಡ ಆರೋಪಿಗಳಾದ ಕುಕ್ಕುಂದೂರು ಗ್ರಾಮದ ಗಣೇಶ್, ಮರ್ಣೆ ಗ್ರಾಮದ ಸಂತೋಷ್ ಹಾಗೂ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಮೊಯಿದು ಕುಂಞ ಯನ್ನು ಬಂಧಿಸಿ, ಕಳವಾದ ಶ್ರೀ ಗಂಧದ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಶ್ರೀಗಂಧದ ಮರಗಳನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!