ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವ ಹಾಗೂ ವಿಜ್ಞಾನ ಮೇಳಗಳಲ್ಲಿ ಕಿಳಿಂಗಾರು ಶಾಲಾ ವಿದ್ಯಾರ್ಥಿ ವೈಷ್ಣವ್ ಭಟ್ ಉತ್ತಮ ಸಾಧನೆ

ಇತ್ತೀಚಿಗೆ ಅಡೂರಿನಲ್ಲಿ ನಡೆದ ಕುಂಬಳೆ ಉಪಜಿಲ್ಲಾ ವೃತ್ತಿಪರಿಚಯ ಮೇಳದಲ್ಲಿ ಕಿಳಿಂಗಾರು ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ವೈಷ್ಣವ್ ಭಟ್ ವೃತ್ತಿಪರಿಚಯ ಮೇಳದ ಬುಕ್ ಬೈಂಡಿಂಗ್ ನಲ್ಲಿ ಪ್ರಥಮ ಸ್ಥಾನ, ಬದಿಯಡ್ಕ ನವಜೀವನ ಪೆರಡಾಲ ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವ ಎಲ್ ಪಿ ವಿಭಾಗ ಕನ್ನಡ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾನೆ.


ಕುಂಟಿಕಾನದ ಶಿವಗಣೇಶ್ ಮತ್ತು ಶಿಕ್ಷಕಿ ಸಹನಾ ದಂಪತಿ ಪುತ್ರನಾದ ಇವನನ್ನು ಶಾಲಾ ವ್ಯವಸ್ಥಾಪಕರು, ಶಾಲಾ ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ , ಮಾತೃಸಂಘ ಅಭಿನಂದಿಸಿರುತ್ತಾರೆ .

SHARE
Loading spinner

Leave a Reply

Your email address will not be published. Required fields are marked *

error: Content is protected !!