
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವು ರಸ್ತೆಗಳು ಹದಗೆಟ್ಟು ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿವೆ. ರಸ್ತೆಗಳ ಮಧ್ಯೆ ನಿರ್ಮಾಣವಾಗಿರುವ ಬೃಹತ್ ಗುಂಡಿಗಳು ಅಪಘಾತಗಳಿಗೆ ಆಹ್ವಾನ ನೀಡುವಂತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

ಈ ಹಿನ್ನೆಲೆಯಲ್ಲಿ ಕಲ್ಲೇರಿ ನಿಸರ್ಗ ಆಟೋ ಚಾಲಕ-ಮಾಲಕ ಸಂಘದ ನೇತೃತ್ವದಲ್ಲಿ ಕಲ್ಲೇರಿ ಪರಿಸರದ ಹದಗೆಟ್ಟ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಸೇವಾ ಕಾರ್ಯ ನಡೆಸಲಾಯಿತು.


ಬೆಳ್ತಂಗಡಿ ತಾಲೂಕಿನ ಹಲವು ರಸ್ತೆಗಳು ಅವ್ಯವಸ್ಥೆಗಳಿಂದ ಕೂಡಿದೆ. ಅನೇಕ ರಸ್ತೆಗಳು ಬಲಿ ತೆಗೆಯಲು ಬಾಯಿ ತೆರೆದಂತಿರುವ ರಸ್ತೆ ಮಧ್ಯೆ ಭಯಾನಕ ಗುಂಡಿಗಳು ಇವೆ.
ಕಲ್ಲೇರಿ ಪರಿಸರದ ಅಸ್ತವ್ಯಸ್ಥಗೊಂಡ ರಸ್ತೆಗಳ ಹೊಂಡಗಳನ್ನು ಕಲ್ಲೇರಿ ನಿಸರ್ಗ ರಿಕ್ಷಾ ಮಾಲಕ ಚಾಲಕರು ಮುಚ್ಚುವ ಮೂಲಕ ಗಮನ ಸೆಳೆದರು.


