ಮಂಗಳೂರಿನಲ್ಲಿ ತುರ್ತು ವೈದ್ಯಕೀಯ ಕ್ಷೇತ್ರದ ಜಾಗತಿಕ ಸಂಗಮಕ್ಕೆ ಕಡಲನಗರಿ ಸಾಕ್ಷಿ …. !

ಮಂಗಳೂರು:ವೈದ್ಯಕೀಯ ಬಿಕ್ಕಟ್ಟುಗಳ ಸಮಯದಲಿ ಸಕಾಲಿಕ ರೋಗನಿರ್ಣಯ, ತ್ವರಿತ ಹಸ್ತಕ್ಷೇಪ ಮತ್ತು ಸಂಘಟಿತ ಆರೈಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಜೀವಗಳನ್ನು ಉಳಿಸುವಲ್ಲಿ ತುರ್ತು ಔಷಧವು ನಿರ್ಣಾಯಕ ಪಾತ್ರ ವಹಿಸುತ್ತದೆ . ತುರ್ತು ಸಂದರ್ಭದಲ್ಲಿ ಪ್ರತಿ ನಿಮಿಷಗಳು ಕೂಡ ಅಮೂಲ್ಯವಾಗಿರುತ್ತದೆ . ವೈದ್ಯಕೀಯ ಕ್ಷೇತ್ರಕ್ಕೆ ಅಗಾಧವಾಗಿ ಕೊಡುಗೆಯನ್ನು ನೀಡುವ ಮಂಗಳೂರಿನಲ್ಲಿ ಅಕ್ಟೋಬರ್ 29 ರಿಂದ ನವೆಂಬರ್ 2 ರ ತನಕ ತುರ್ತು ಔಷಧದ ಕುರಿತು ಐದು ದಿನಗಳ ಬಹುಶಿಸ್ತೀಯ ಅಂತರರಾಷ್ಟ್ರೀಯ ಸಮ್ಮೇಳನವಾದ XI ವರ್ಲ್ಡ್ ಅಕಾಡೆಮಿಕ್ ಕಾಂಗ್ರೆಸ್ ಆಫ್ ಎಮರ್ಜೆನ್ಸಿ ಮೆಡಿಸಿನ್ (WACEM25) ಕಾರ್ಯಕ್ರಮವು ಮಂಗಳೂರಿನ ಎ.ಜೆ. ಇನ್ನಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ & ರಿಸರ್ಚ್ ಸೆಂಟರ್‌ಲ್ಲಿ ನಡೆಯಲಿದೆ ಎಂದು ಐಎಪಿಯ ಮಾಜಿ ಅಧ್ಯಕ್ಷ ಡಾ. ಸಂತೋಷ್ ಸೋನ್ಸ್ ತಿಳಿಸಿದರು .

ಅವರು ನಗರದ ಪತ್ರಿಕಾಭನದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಈ ಕಾರ್ಯಕ್ರಮವನ್ನು ಇಂಡೋ-ಯುಎಸ್ ಕೊಲಾಬರೇಟಿವ್ ಫಾರ್ ಅಕಾಡೆಮಿಕ್ ಎಮರ್ಜೆನ್ಸಿ ಅಂಡ್ ಟ್ರಾಮಾ ಇನ್ ಇಂಡಿಯಾ (INDUSEM) ಆಯೋಜಿಸಿದ್ದು, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (IAP), WHO ಕೊಲಾಬರೇಟಿಂಗ್ ಸೆಂಟರ್ ಫಾರ್ ಎಮರ್ಜೆನ್ಸಿ ಅಂಡ್ ಟ್ರಾಮಾ ಇನ್ ಆಗೋಯ ಏಷ್ಯಾ (WHO-CCET SEAR) ಸಹಭಾಗಿತ್ವದಲ್ಲಿ ಹಲವಾರು ಜಾಗತಿಕ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಆಯೋಜಿಸಲಾಗಿದೆ ಎಂದರು .

ಪ್ರಪಂಚದಾದ್ಯಂತದ ಪ್ರಮುಖ ತುರ್ತು ವೈದ್ಯಕೀಯ ತಜ್ಞರು ಸೇರಿದಂತೆ 800 ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು 60 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಅಧ್ಯಾಪಕ ಸದಸ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಆರೋಗ್ಯ ಸೇವೆಯ ಎಲ್ಲಾ ಶಾಖೆಗಳಲ್ಲಿ ತುರ್ತು ಪ್ರತಿಕ್ರಿಯೆಯನ್ನು ಹೆಚ್ಚಿಸುವ ಬಹು ಶೈಕ್ಷಣಿಕ ಅಧಿವೇಶವಾಗಲಿದೆ . ಸಮ್ಮೇಳದಲ್ಲಿ ಮಂಗಳೂರಿನ ಪ್ರಮುಖ ವೈದ್ಯಕೀಯ ಕಾಲೇಜುಗಳು ಇದರಲ್ಲಿ ಭಾಗವಹಿಸಿಯಲಿದ್ದಾರೆ ಎಂದರು .

ಅಕ್ಟೋಬರ್ ೩೧ ರಂದು ಸಂಜೆ ೫ ಗಂಟೆಗೆ ನಡೆಯುವ WACEM25 ಔಪಚಾರಿಕ ಉದ್ಘಾಟನೆಯ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ದರ್ಶನ್ ಹೆಚ್ ವಿ , ಹಿರಿಯ ವೈದ್ಯರಾದ ಎ ಜೆ ಶೆಟ್ಟಿ ಸಹಿತ ಹಲವು ವೈದ್ಯರು ಉಪಸ್ಥಿತಿ ಇರಲಿದ್ದಾರೆ ಎಂದು ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ WACEM ನ ಪ್ರಧಾನ ಕಾರ್ಯದರ್ಶಿ ಡಾ ವಿಮಲ್ ಕೃಷ್ಣನ್ ಪಿಳ್ಳೆ , ಡಾ. ನಿಖಿಲ್ ಶೆಟ್ಟಿ , ಡಾ. ರಯಾನ್ ಫರ್ನಾಂಡಿಸ್ ಮುಂತಾದವರು ಉಪಸ್ಥಿತತರಿದ್ದರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!