ಕಡಬದಲ್ಲಿ 9ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಕಡಬ, ನ.6: ಕಡಬ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆ ಗ್ರಾಮದ 9ನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

ಮೃತ ಬಾಲಕ ಗಗನ್ (14) ಸ್ಥಳೀಯ ಶಾಲೆಯ ವಿದ್ಯಾರ್ಥಿಯಾಗಿದ್ದು, ಪೋಷಕರಾದ ತಂದೆ-ತಾಯಿ ಹಾಗೂ ಇಬ್ಬರು ಸಹೋದರ-ಸಹೋದರಿಯರೊಂದಿಗೆ ನೂಜಿಬಾಳ್ತಿಲ ಗ್ರಾಮದ ಖಂಡಿಗ ಮನೆಯಲ್ಲಿ ವಾಸವಾಗಿದ್ದನು.

ನ.6ರಂದು ಪೋಷಕರು ಶಾಲೆಗೆ ತೆರಳಿ ಮಗನ ವಿದ್ಯಾಭ್ಯಾಸದ ಪ್ರಗತಿ ಕುರಿತು ವಿಚಾರಿಸಿದಾಗ, ಆತನ ಕಲಿಕಾ ಪ್ರಗತಿ ತೃಪ್ತಿಕರವಾಗಿಲ್ಲವೆಂಬ ಮಾಹಿತಿ ದೊರೆತಿತ್ತು. ಸಂಜೆ ಮನೆಗೆ ಮರಳಿದ ಬಾಲಕ ಆಟವಾಡಿ ಬಳಿಕ ತನ್ನ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾನೆ. ಕೆಲವು ಸಮಯದ ಬಳಿಕ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಪೋಷಕರು ಬಲವಂತವಾಗಿ ಬಾಗಿಲು ತೆರೆಯಲು ಪ್ರಯತ್ನಿಸಿದಾಗ, ಬಾಲಕ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದನು.

ತಕ್ಷಣ ಆತನನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯಾಧಿಕಾರಿಯವರು ಪರೀಕ್ಷಿಸಿ ಆತ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 32/2025, ಕಲಂ 194 BNSS-2023ರಡಿ ಪ್ರಕರಣ ದಾಖಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!