ಮಂಗಳೂರು:ಮಂಗಳೂರಿನ ಬೊಂದೇಲ್ ಸಮೀಪದ ಕೃಷ್ಣ ನಗರದಲ್ಲಿ ಕಳೆದ 30 ವರ್ಷಗಳಿಂದ ಸಾಂಸ್ಕೃತಿಕ,ಧಾರ್ಮಿಕ ಚಟುವಟಿಕೆಗಳಿಗೆ ಮತ್ತು ಸ್ಥಳೀಯ ನಿವಾಸಿಗಳ ಮಕ್ಕಳು ಹಾಗೂ ಯುವಕರು ಆಟವಾಡುತ್ತಿರುವ ಸಾರ್ವಜನಿಕ ಮೈದಾನದ ಜಾಗವನ್ನು ಸರಕಾರವು ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಬಿಟ್ಟು ಕೊಟ್ಟಿದ್ದು ಆ ಜಾಗವನ್ನು ಸಾರ್ವಜನಿಕ ಮೈದಾನ ವಾಗಿ ಯಥಾಸ್ಥಿತಿ ಯಾಗಿ ಕಾದಿರಿಸುವಂತೆ ಊರಿನ ಸರ್ವ ನಾಗರೀಕರ ಪ್ರತಿಭಟನಾ ಸಭೆಯು ಹೋರಾಟ ಸಮಿತಿಯ ಅದ್ಯಕ್ಷರಾದ ಶ್ರೀನಿವಾಸ ಸಾಲಿಯಾನ್ ರವರ ನೇತೃತ್ವದಲ್ಲಿ ಜರುಗಿತು.
ಹೋರಾಟ ಸಮಿತಿಯ ಅದ್ಯಕ್ಷರಾದ ಶ್ರೀನಿವಾಸ ಸಾಲಿಯಾನ್ ಮಾತನಾಡಿ , ಈ ಸಮಸ್ಯೆಯ ಬಗ್ಗೆ ಮಹಾನಗರ ಪಾಲಿಕೆ ಹಾಗೂ ತಹಶೀಲ್ದಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನ ಪರಿಷತ್ ಸದಸ್ಯರಿಗೆ ಮತ್ತು ಮಂಗಳೂರು ಮಹಾನಗರ ಪಾಲಿಕೆಗೂ ಮನವಿ ಮಾಡಿ ನಕ್ಷೆ ತಯಾರಿಸಿದ್ದರೂ ಆ ಜಾಗ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಆರ್.ಟಿ.ಸಿ ಆಗಿದೆ. ಇದಕ್ಕೆ ಮುಖ್ಯ ಕಾರಣ ಸಂಬಂಧಪಟ್ಟ ಅಧಿಕಾರಿ ವರ್ಗದ ಬೇಜವಾಬ್ದಾರಿ ಎಂದವರು ಹೇಳಿದರು .
2ನೇ ಅರ್ಜಿ ಕೊಟ್ಟಾಗ ತಹಶೀಲ್ದಾರರು ಆ ಜಾಗವನ್ನು ಮರು ಸರ್ವೆ ಮಾಡಲು ಆದೇಶಿಸಿದರು. ಆಗ ಆ ಸರ್ವೆ ನಂಬ್ರದಲ್ಲಿ ಬೇರೆ ಜಾಗ ಇಲ್ಲದ ಕಾರಣ ಬೇರೆ ಜಾಗ ಇದ್ದರೆ ನಮಗೆ ತಿಳಿಸಿ ಎಂದು ತಹಶೀಲ್ದಾರರು ತಿಳಿಸಿದ್ದರು. ಆ ಸಂದರ್ಭದಲ್ಲಿ ನಾವು ಮಾಹಿತಿ ಹಕ್ಕಿಗೆ ಅರ್ಜಿ ಹಾಕಿ ನೋಡಿದಾಗ ಆಯುಷ್ ಇಲಾಖೆಗೆ 48 ಸೆಂಟ್ಸ್ ಜಾಗವನ್ನು ಸರಕಾರ ಕೊಟ್ಟಿದ್ದು ಕಂಡುಬಂತು. ಆದರೆ ಆಯುಷ್ ಇಲಾಖೆಯವರು 4 ವರ್ಷದಿಂದ ಆ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎಂದರು . .
ಸುಮಾರು 600 ಮನೆಗಳಿರುವ ಈ ಪ್ರದೇಶಕ್ಕೆ ಒಂದೇ ಸಾರ್ವಜನಿಕ ಮೈದಾನ ಇರುವುದರಿಂದ ಇದನ್ನು ಸ್ಥಳೀಯರಿಗೆ ಮೀಸಲು ಇಡುವಂತೆ ಹೇಳಿದರು . . ಕೃಷ್ಣ ನಗರದ ಅನ್ನಪೂರ್ಣೇಶ್ವರಿ ಭಕ್ತರು ಶ್ರೀ ಕೃಷ್ಣ ಭಜನಾ ಮಂದಿರ ಎಸ್.ಎಸ್.ಎಫ್ ಸಂಘಟನೆ ಸೈನ್ ಕ್ರಿಕೇಟರ್ಸ್ ವೈ.ಎಫ್.ಸಿ ಮತ್ತು ಬೊಂದೇಲ್ ರಿಕ್ಷಾ ಚಾಲಕ ಮತ್ತು ಮಾಲಕರು, ಮದ್ರಸ ಸಮಿತಿ ಅಂಗನವಾಡಿ ಕೇಂದ್ರದ ಎಲ್ಲಾ ಕಾರ್ಯಕ್ರಮ ನಡೆಸುವ ಸಾರ್ವಜನಿಕ ಮೈದಾನಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಯವರು, ತಹಶೀಲ್ದಾರರು ಈ ಮನವಿಯನ್ನು ಪರಿಗಣಿಸಿ ಕೂಡಲೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರ್ವಜನಿಕ ಮೈದಾನವನ್ನು ರಂಗಮಂದಿರ ನಿರ್ಮಾಣ ಮಾಡಲು ಹಾಗೂ ಮಕ್ಕಳಿಗೆ ಆಟೋಟ ಕಾರ್ಯಕ್ರಮವನ್ನು ಈ ಹಿಂದಿನಂತೆಯೇ ನಡೆಯಲು ಅವಕಾಶವನ್ನು ಕಲ್ಪಿಸಬೇಕು ಎಂಧದವರು ಒತ್ತಾಯಿಸಿದರು .
ಪ್ರತಿಭಟನೆ ಯಲ್ಲಿ ಸಾಮಾಜಿಕ ಮುಖಂಡರಾದ ಉಮೇಶ್ ದಂಡಕೇರಿ,ರೆಹಮಾನ್ ಖಾನ್ ಕುಂಜತ್ತಬೈಲ್,ಶಕುಂತಲಾ ಕಾಮತ್ ಸಂಸಾದ್ ಕುಂಜತ್ತಬೈಲ್,ಎಂ.ಕೆ ಉಮರ್,ಅನಿತಾ ಡಿಸೋಜ, ಕಲಾವಿದ ಬಾಬು ದಾಸ್ ಟೈಲರ್, ಕೆ.ಮೊಹಮ್ಮದ್,ಅಬ್ದುಲ್ ಹಮೀದ್, ವಿಕ್ಟರ್ ಡಿಸೋಜ,ಸಂತೋಷ ಡಿಸೋಜ,ಪೈಜಲ್ ಮರಕಡ, ಪೆಲಿಕ್ಸ್ ಸಲ್ದಾನ, ಪ್ರಮೀಳಾ,ಸಾಹುಲ್ ಮುಂತಾದವರು ಉಪಸ್ಥಿತರಿದ್ದರು .