ಉಳ್ಳಾಲ:ಡಿವೈಎಫ್ ಐ ಕುತ್ತಾರು ಬಟ್ಟೆದಡಿ ಘಟಕದ ಆಶ್ರಯದಲ್ಲಿ ಡಿವೈಎಫ್ ಐ ಘಟಕ ಸಮ್ಮೇಳನ ಹಾಗೂ ಬಹಿರಂಗ ಸಭೆ ಕುತ್ತಾರಿನ ಕಾಂ. ಯೋಗೀಶ ಕುತ್ತಾರು ವೇದಿಕೆಯಲ್ಲಿ ನಡೆಯಿತು.
ಬಹಿರಂಗ ಸಭೆ ಯನ್ನು ಉದ್ದೇಶಿಸಿ ಪತ್ರಕರ್ತ ನವೀನ್ ಸೂರಿಂಜೆ ಮಾತನಾಡಿ ಸಾಹಿತಿಗಳು, ಬರಹಗಾರರು, ಚಳುವಳಿಗಾರರು, ಪತ್ರಕರ್ತರು ಒಗ್ಗಟ್ಟಾಗಬೇಕಿದೆ. ಸರಕಾರದ ತಪ್ಪುಗಳನ್ನು ತಿಳಿಸುವ ಕಾರ್ಯವನ್ನು ಮಾಡುವ ಮೂಲಕ ಸಮಾಜವನ್ನು ಕಟ್ಟಬೇಕಿದೆ ಎಂದು ಪತ್ರಕರ್ತ ನವೀನ್ ಸೂರಿಂಜೆ ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ನವೀನ್ ಸೂರಿಂಜೆ, DYFI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಕಾಂ. ಸಂತೋಷ್ ಬಜಾಲ್, DYFI ಉಳ್ಳಾಲ ತಾಲೂಕು ಸಮಿತಿ ಕಾರ್ಯದರ್ಶಿ ಕಾಂ. ರಿಜ್ವಾನ್ ಹರೇಕಳ, DYFI ಜಿಲ್ಲಾ ಮುಖಂಡ ಕಾಂ. ಸುನೀಲ್ ತೇವುಲ ಮೊದಲಾದವರು ಭಾಗವಹಿಸಿದ್ದರು