ತೊಕ್ಕೊಟ್ಟುವಿನಲ್ಲಿ ಉಚಿತ ಕೈತೋಟ, ತಾರಸಿ ತೋಟ ತರಬೇತಿ ಹಾಗೂ ಬೀಜ ವಿತರಣೆ ಕಾರ್ಯಕ್ರಮ

ಉಳ್ಳಾಲ: ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆ ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ಕೈತೋಟ ಮತ್ತು ತಾರಸಿ ತೋಟ ತರಬೇತಿ ಕಾರ್ಯಕ್ರಮ ತೊಕ್ಕೊಟ್ಟುವಿನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ, ಫುಡ್ ಚೈನ್ ಕ್ಯಾಂಪೇನ್, ಶಿವಾಜಿ ಫ್ರೆಂಡ್ಸ್ ಸರ್ಕಲ್, ಸ್ವಾಮಿ ಕೊರಗಜ್ಜ ಸೇವಾ ಸಮಿತಿ ತೊಕ್ಕೊಟ್ಟು, ರಿಚಲ್ ಸರ್ವಿಸಸ್ ಹಾಗೂ ಮಂಗಳೂರು ಆಟೋ ರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ತೊಕ್ಕೊಟ್ಟು ಇವುಗಳು ಸಹಭಾಗಿತ್ವ ನೀಡಿದವು. ಈ ಸಂದರ್ಭದಲ್ಲಿ ತರಕಾರಿ ಬೀಜ ಮತ್ತು ಸಸಿಗಳನ್ನೂ ವಿತರಿಸಲಾಯಿತು. ಕಾರ್ಯಕ್ರಮವನ್ನು ಫೆರ್ಮನ್ನೂರು ಚರ್ಚ್‌ನ ಫಾದರ್ ಸಿಪ್ರಿಯನ್ ಡಿಸೋಜ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅತಿಥಿಗಳು, ಪಂಚಾಯತ್ ಮಟ್ಟದಲ್ಲಿ ಸೌಲಭ್ಯಗಳಿದ್ದರೂ ರಸ್ತೆ ಮತ್ತು ಚರಂಡಿಗಳಲ್ಲಿ ಕಸ ವಿಲೇವಾರಿ ಮಾಡುತ್ತಿರುವುದು ವಿಷಾದನೀಯ ಎಂದು ಅಭಿಪ್ರಾಯಪಟ್ಟರು. ಕಸ ಸುಡಬಾರದ ಸ್ಥಳಗಳಲ್ಲಿ ಕಸ ಸುಡುವುದರಿಂದ ಪರಿಸರ ಹಾನಿ ಉಂಟಾಗುತ್ತಿದ್ದು, ಪ್ಲಾಸ್ಟಿಕ್ ಸುಡುವುದರಿಂದ ಸಾಂಕ್ರಾಮಿಕ ರೋಗಗಳ ಅಪಾಯ ಹೆಚ್ಚುತ್ತಿದೆ ಎಂದು ಎಚ್ಚರಿಸಿದರು. ಸಣ್ಣ ಬಾಟಲಿ ಹಾಗೂ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ನೀರು ಕುಡಿಯುವ ಪದ್ಧತಿಯನ್ನು ತೊರೆಯಬೇಕು ಎಂದು ಕರೆ ನೀಡಿದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಪ್ರದೀಪ್ ಡಿಸೋಜ, ಪ್ರವೀಣ್ ಕೆ. ಹಾಗೂ ರಾಜ್ಯ ವಲಯ ನಿರ್ದೇಶಕ ಪ್ರಮೋದ್ ಸಿ.ಎಮ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್, ಸ್ವಚ್ಛತಾ ಅಭಿಯಾನದ ರಾಯಭಾರಿ ಶೀನಶೆಟ್ಟಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷೆ ಡಾ. ಭಾರತಿ ನಿರ್ಮಲ್ ಹಾಗೂ ಫುಡ್ ಚೈನ್ ಕ್ಯಾಂಪೇನ್ ಸ್ಥಾಪಕ ಯತೀಶ್ ತುಕರಾಮ್ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಪೊಯ್ಯತಬೈಲ್, ಶಿವಾಜಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಯು.ಎಚ್. ಅಲ್ತಾಫ್, ಸ್ವಚ್ಛತಾ ಅಭಿಯಾನದ ರಾಯಭಾರಿ ಕೃಷ್ಣ ಮೂಲ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸಿರಿಲ್ ರಾಬರ್ಟ್ ಡಿ ಸೋಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿದ್ದು, ಪ್ರವೀಣ್ ಕುಂಪಲ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!