ಮಾಂಸದ ಕೋಳಿಗಳ ಸಾಕಾಣಿಕೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು

ಕೋಳಿ ಮನೆಗಳಲ್ಲಿ ದಿನದ 24 ಗಂಟೆಗಳ ಕಾಲ ತಂಪಾದ ಮತ್ತು ಶುಚಿಯಾದ ನೀರನ್ನು ಒದಗಿಸಬೇಕು. ಒಂದು ಗಂಟೆ ನೀರು ಇಲ್ಲದಿದ್ದರೆ ಕೋಳಿಗಳು ಸಾವನ್ನಪ್ಪಬಹುದು. ಚೆನ್ನಾಗಿ ಗಾಳಿಯಾಡಲು ಅನುಕೂಲವಾಗುವಂತೆ ಎಲ್ಲಾ ತಡೆಗಳನ್ನು ತೆಗೆಯಬೇಕು. ಕೋಳಿ ಮನೆ ಮಾಡಿನ ಮೇಲ್ಭಾಗಕ್ಕೆ ಸುಣ್ಣ ಬಳಿಯಬೇಕು ಆಥವಾ ಹುಲ್ಲು ಅಡಿಕೆಗರಿ, ತೆಂಗಿನ ಗರಿಗಳಿಂದ ಹೊದಿಸಬೇಕು. ಅನುಕೂಲವಿದ್ದರೆ ಕೋಳಿ ಮನೆಯ ಮಾಡಿನ ಮೇಲೆ ಸ್ಪ್ರಿಂಕ್ಲರ್ನಲ್ಲಿ ನೀರು ಸಿಂಪಡಿಸಬೇಕು. ಕೋಳಿ ಮನೆಯ ಒಳಗೆ ಫ್ಯಾನ್ ಅಥವಾ ಫಾಗಸ್ರ್ಗಳನ್ನು ಅಳವಡಿಸಬೇಕು.

ವಿಟಮಿನ್ ಸಿ ಮತ್ತು ಇತರೆ ಎಲೆಕ್ಟ್ರೋಲೈಟ್‍ಗಳನ್ನು ಉಪಯೋಗಿಸುವುದರಿಂದ ಕೋಳಿಗಳ ಮೇಲೆ ಆಗುವ ಬಿಸಿಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಅಥವಾ ಅಡುಗೆ ಸೋಡ 1 ಗ್ರಾಂ ನ್ನು 5 ಲೀಟರ್ ನೀರಿಗೆ ಬೆರೆಸಿ ಕೋಳಿಗಳಿಗೆ ಕುಡಿಯಲು ನೀಡಬೇಕು. ಕೋಳಿ ಮನೆಗಳಲ್ಲಿ ನೀರಿನ ಟ್ಯಾಂಕಿನ ಹೊರಮೈಗೆ ಬಿಳಿಬಣ್ಣ ಬಳಿಯಬೇಕು ಅಥವಾ ಗೋಣಿಯನ್ನು ಸುತ್ತಲೂ ಕಟ್ಟಿ ದಿನಕ್ಕೆರಡು ಬಾರಿ ನೀರಿನಿಂದ ಒದ್ದೆ ಮಾಡಬೇಕು ಅಥವಾ ಚಪ್ಪರ ಹಾಕಬೇಕು. ಬೇಸಿಗೆ ಅವಧಿಯಲ್ಲಿ ನೀರಿನಲ್ಲಿ ಹಾನಿಕಾರಕ ಸೂಕ್ಷ್ಮ ಜೀವಿಗಳು ಹೆಚ್ಚಿರುವುದರಿಂದ ಸೋಂಕು ನಿವಾರಕಗಳನ್ನು ಉಪಯೋಗಿಸಬೇಕು. ಅತೀ ಉಷ್ಣ ಹಾಗೂ ಮೋಡ ಕವಿದ ವಾತಾವರಣ ಇದ್ದಾಗ ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆ ತನಕ ಕೋಳಿಗಳ ಮೇಲೆ ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ಕೋಳಿ ಮನೆಗಳ ಒಳಗೆ ಬಿಸಿಲು ಬೀಳದಂತೆ ಎಚ್ಚರವಹಿಸಬೇಕು.

ಬೇಸಿಗೆಯಲ್ಲಿ ಕೋಳಿಗಳು 20 ದಿನದ ನಂತರ, ಆ ದಿನಕ್ಕೆ ನಿಗದಿಪಡಿಸಿದ ಕೋಳಿ ಆಹಾರ ತಿನ್ನುವ ಸಾಧ್ಯತೆ ಕಡಿಮೆ. ಆದದ್ದರಿಂದ ರೈತರು ದಿನದ ತಂಪಾದ ಸಮಯ ಅಂದರೆ ರಾತ್ರಿ 12 ಗಂಟೆ ತನಕ ಅಥವಾ ಬೆಳಗ್ಗೆ 4 ರಿಂದ 8 ಗಂಟೆ ಅವಧಿಯಲ್ಲಿ ಕೋಳಿಗಳಿಗೆ ಅಹಾರ ಒದಗಿಸಬೇಕು. ಕೋಳಿ ಮನೆಗಳ ಸುತ್ತಲಿನ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳುವುದು ಹಾಗೂ ನಿಯಮಿತವಾಗಿ ಸೋಂಕು ನಿವಾರಕ ದ್ರಾವಣ (ಆisiಟಿಜಿeಛಿಣಚಿಟಿಣ Soಟuಣioಟಿ) ಸಿಂಪಡಿಸಬೇಕು. ಮಾನವೀಯತೆ ದೃಷ್ಟಿಯಿಂದ ಇತರೆ ಪ್ರಾಣಿ ಪಕ್ಷಿಗಳಿಗೆ ಕೂಡ ತಮ್ಮ ಮನೆ ಅಥವಾ ತೋಟದ ಆಸುಪಾಸು ಸ್ವಚ್ಛ ನೀರು ಸಿಗುವಂತೆ ವ್ಯವಸ್ಥೆ ಮಾಡಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!