ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಯುವಕನ ಬಂಧನ

ಮಂಗಳೂರು ನಗರ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮುಹಮ್ಮದ್ ಝಾಕೀರ್, ಬಂಧಿತ ಯುವಕ. ಮಂಗಳೂರು ನಗರ ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಎದುರು ಫೀಜಾ ಮೈದಾನದ ಸಾರ್ವಜನಿಕ ಸ್ಥಳದಲ್ಲಿ ಮೊಹಮ್ಮದ್ ಝಾಕೀರ್ ಎಂಬಾತನು ಎಮ್.ಡಿ.ಎಮ್.ಎ ಮಾದಕವಸ್ತುವನ್ನು ತಂದು ತನ್ನ ಗಿರಾಕಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು.

ಇದೇ ವೇಳೆ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಒಟ್ಟು 1,06,000 ರೂಪಾಯಿ ಬೆಲೆ ಬಾಳುವ ನಿಷೇಧಿತ ಮಾದಕ ವಸ್ತುವಾದ 10.6 ಗ್ರಾಂ ತೂಕದ ಎಮ್.ಡಿ.ಎಮ್.ಎ ಮತ್ತು | ಸ್ಯಾಮ್ ಸಂಗ್ ಮೊಬೈಲ್ ಫೋನ್ ಹಾಗೂ ತೂಕಮಾಪನ-1, ಸ್ಟೋಕ್ ಟ್ಯೂಬ್-1, ಸಿರಿಂಜ್, ಸಿಗರ್ ಲೈಟ್ ಮತ್ತು ನಂಬರ್ ಪ್ಲೇಟ್ ಇರದ ಹೀರೋ ಹೋಂಡಾ ಸ್ಪೆಂಡರ್ ಪ್ಲಸ್ ಹೊಸ ಬೈಕ್ ಹಾಗೂ ಇತರೆ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!