ಮೊಬೈಲ್ ಸುಳಿಗೆ ಪ್ರಕರಣ,ತಲೆಮರೆಸಿದ್ದ ಆರೋಪಿಯ ದಸ್ತಗಿರಿ ಮಾಡಿದ ಉಳ್ಳಾಲ ಪೊಲೀಸರು.

ಮಂಗಳೂರು : ಮನೆಗೆ ನುಗ್ಗಿ ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿ ಆತನ ಮೊಬೈಲ್ ಸುಳಿಗೆ ಮಾಡಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಉಳ್ಳಾಲ ಪೊಲೀಸರು ದಸ್ತಗಿರಿ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಉಳ್ಳಾಲ ಖಿಲ್ರಿಯಾ ನಗರ ನಿವಾಸಿ ನಿಫಾನ್ ಅಹ್ಮದ್ ಪಾಷ(33)ಬಂಧಿತ ಆರೋಪಿಯಾಗಿದ್ದಾನೆ.

ಬಂಧಿತ ನಿಫಾನ್ ಕಳೆದ ಫೆಬ್ರವರಿ 5 ರಂದು ಮಧ್ಯರಾತ್ರಿ ತನ್ನ ಸಹವರ್ತಿಗಳಾದ ನಿಝಪತ್ ಅಲಿ ಮತ್ತು ಅಮೀರ್ ಸುಹೈಲ್ ಜೊತೆ ಸೇರಿ ಕೋಟೆಪುರದ ಮಹಮ್ಮದ್ ತಸ್ವೀರ್ ಎಂಬವರ ಮನೆಗೆ ನುಗ್ಗಿದ್ದಲ್ಲದೆ,ತಸ್ವೀರ್ಗೆ ಹಲ್ಲೆಗೈದು ಅವರ ಮೊಬೈಲ್ ಫೋನನ್ನು ದೋಚಿರುವ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2024 ರ ಡಿಸೆಂಬರ್ ತಿಂಗಳಲ್ಲಿ ತನ್ನ ಕಾರನ್ನ ತಡೆದು ನಿಲ್ಲಿಸಿದ ನೆಪದಲ್ಲಿ ಸಹಚರರೊಂದಿಗೆ ಸೇರಿ ತಲಪಾಡಿ ಟೋಲ್‌ಗೇಟ್ ನ ಸಿಬ್ಬಂದಿಗಳಿಗೂ ಹಲ್ಲೆ ನಡೆಸಿರುವ ಕುರಿತಂತೆ ಬಂಧಿತ ಆರೋಪಿ ನಿಫಾನ್ ಅಹ್ಮದ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!