ಭಾರಿ ಮಳೆಗೆ ಆವರಣ ಗೋಡೆ ಕುಸಿತ: ಮಂಗಳೂರಿನಲ್ಲಿ ವಾಹನಗಳಿಗೆ ಹಾನಿ, ಸ್ಥಳೀಯರ ಆಕ್ರೋಶ

ಮಂಗಳೂರು: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಯೆಯ್ಯಾಡಿ ಸಮೀಪದ ಕೈಗಾರಿಕಾ ವಲಯದ ಗುಂಡಳಿಕೆ ಬಳಿ ಖಾಸಗಿ ಜಾಗವೊಂದರ ಸುಮಾರು 60 ವರ್ಷ ಹಳೆಯ ಆವರಣ ಗೋಡೆ ಕುಸಿದು ಹಲವಾರು ದ್ವಿಚಕ್ರ ವಾಹನಗಳಿಗೆ ಹಾನಿಯಾದ ಘಟನೆ ನಡೆದಿದೆ.

ಘಟನೆ ಸಂಭವಿಸಿದ ಪ್ರದೇಶದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದೇ ದಾರಿಯಲ್ಲಿ ಸಂಚರಿಸುತ್ತಿರುವುದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸ್ಥಳೀಯರ ಪ್ರಕಾರ, ಈ ಪ್ರದೇಶದಲ್ಲಿ ಪ್ರತೀ ಮಳೆಯಲ್ಲೂ ಗೋಡೆಗಳು ಕುಸಿದು ಮನೆಗಳ ಮೇಲೆ ಬೀಳುವುದು ಸಾಮಾನ್ಯವಾಗಿದ್ದು, ಇದರಿಂದ ಅಪಾಯ ಹೆಚ್ಚುತ್ತಿದೆ. ಈ ಬಗ್ಗೆ ಹಲವು ಬಾರಿ ಜಾಗದ ಮಾಲಕರು, ಕಾರ್ಪೊರೇಟರ್ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸ್ಥಳೀಯ ನಿವಾಸಿಗಳು ತಕ್ಷಣವೇ ಜಾಗದ ಮಾಲಕರು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಈ ಸಮಸ್ಯೆಗೆ ಗಮನಹರಿಸಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಘಟನೆ ಮತ್ತೆ ನಗರದಲ್ಲಿ ಮಳೆಗಾಲದ ಅವಧಿಯಲ್ಲಿ ಸುರಕ್ಷತೆ ಕುರಿತ ಚಿಂತೆಯನ್ನು ಎಬ್ಬಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!