ಕಾಸರಗೋಡು: ಅಂಬಲತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಅಟ್ಟೇಂಗಾನಂ ಮತ್ತು ವೆಳ್ಳಮುಂಡದಲ್ಲಿ ಮೂವರ ಮೇಲೆ ಚೂರಿಯಿಂದ ಇರಿದು ಗಾಯಗೊಳಿಸಲಾಗಿದೆ.ರಾಘವನ್ ನಾಯರ್ (70), ಅವರ ಪತ್ನಿ ಇಂದಿರಾ (65) ಮತ್ತು ನೆರೆಮನೆಯ ಯದು (30) ಗಾಯಗೊಂಡವರು.ಗಾಯಾಳುಗಳನ್ನು ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿ ನಡೆಸಿದ 25 ವರ್ಷದ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಶನಿವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಈ ನಡುಗಿಸುವ ಘಟನೆ ನಡೆದಿದೆ.ರಾಘವನ್ ನಾಯರ್ ಅವರ ಮನೆಯ ಅಂಗಳಕ್ಕೆ ನುಗ್ಗಿದ ಆರೋಪಿ ದಾಳಿ ನಡೆಸಿದ್ದಾನೆ.

ಮೊದಲಿಗೆ ರಾಘವನ್ ನಾಯರ್ ಅವರ ಮೇಲೆ ದಾಳಿ ಮಾಡಿದ್ದು, ಅವರ ಕಿರುಚಾಟ ಕೇಳಿ ಓಡಿಬಂದ ಪತ್ನಿ ಇಂದಿರಾ ಅವರ ಮೇಲೆಯೂ ಹಲ್ಲೆ ನಡೆಸಿದ್ದಾನೆ. ದಂಪತಿಯ ಬೊಬ್ಬೆ ಕೇಳಿ ಸಹಾಯಕ್ಕೆ ಧಾವಿಸಿ ಬಂದು ದಾಳಿಯನ್ನು ತಡೆಯಲು ಯತ್ನಿಸಿದ ನೆರೆಮನೆಯ ಯದು ಅವರಿಗೂ ಚೂರಿಯಿಂದ ಇರಿಯಲಾಗಿದೆ.
ಮೂವರಿಗೂ ಕೈಗಳಿಗೆ ತೀವ್ರ ಗಾಯಗಳಾಗಿವೆ. ಕಿರುಚಾಟ ಕೇಳಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ದಾಳಿ ನಡೆಸಿದ ಯುವಕನನ್ನು ಹಿಡಿದು ಅಂಬಲತ್ತರ ಪೊಲೀಸರಿಗೆ ಒಪ್ಪಿಸಿದ್ದಾರೆ.

