ಮಂಗಳೂರು ನಗರದ ಕದ್ರಿ ಮಾರ್ಕೆಟ್, ಮಲ್ಲಿಕಟ್ಟೆ ಪ್ರದೇಶದಲ್ಲಿ Bharat Petroleum ಸಂಸ್ಥೆಯ ಭಾರತ್ಗ್ಯಾಸ್ ವಿತರಕರಾದ Kamadhenu Gas Agencies ಅವರ ವತಿಯಿಂದ ವಲಸೆ ಕಾರ್ಮಿಕರು, ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳಿಗಾಗಿ 5 ಕೆಜಿ FTL ಶಿಬಿರವನ್ನು ಆಯೋಜಿಸಲಾಯಿತು.
ಹೊಸ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಹಲವರು ಸ್ಥಳಕ್ಕೆ ಭೇಟಿ ನೀಡಿ ಯೋಜನೆ ಕುರಿತು ಆಸಕ್ತಿ ತೋರಿದರು.
ಕಾರ್ಯಕ್ರಮದಲ್ಲಿ ಪ್ರದೇಶ ವ್ಯವಸ್ಥಾಪಕರಾದ ಶ್ರೀ ಸಂದೀಪ್ ಕುಮಾರ್ ರೈನಾ, ಹಿರಿಯ ಮಾರಾಟ ಅಧಿಕಾರಿಯಾದ ಶ್ರೀ ಅನಂತ ರಾವ್ ಹಾಗೂ ವಿತರಕರಾದ ಶ್ರೀ ದಿನೇಶ್ ಶೆಟ್ಟಿ ಭಾಗವಹಿಸಿ, 5 ಕೆಜಿ FTL ಯೋಜನೆಯ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ವಿಶೇಷವಾಗಿ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಅಡುಗೆ ಅನಿಲ ಸೌಲಭ್ಯ ಸುಲಭವಾಗಿ ಲಭ್ಯವಾಗುವಂತೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ಶಿಬಿರದ ವೇಳೆ ಸ್ಥಳದಲ್ಲೇ ವಿವಿಧ ವಿಚಾರಣೆಗಳನ್ನು ಸ್ವೀಕರಿಸಲಾಗಿದ್ದು, ನೋಂದಣಿ ಪ್ರಕ್ರಿಯೆಯೂ ನಡೆಸಲಾಯಿತು.
ಈ ಶಿಬಿರವು ನಗರ ಪ್ರದೇಶದ ತಾತ್ಕಾಲಿಕ ವಾಸಿಗರು ಮತ್ತು ಸಣ್ಣ ಬಳಕೆದಾರರಿಗೆ ಅನುಕೂಲಕರ ಯೋಜನೆಯಾಗಿ ಪರಿಣಮಿಸಿದೆ.