ಬೋಳಿಯಾರ್: ಬಿಂದಾಝ್ ಫ್ರೆಂಡ್ಸ್ (ರಿ) ಬೋಳಿಯಾರ್ ಇದರ ರಜತ ಮಹೋತ್ಸವದ ಸವಿನೆನಪಿಗಾಗಿ ಸಾರ್ವಜನಿಕರ ಸೇವೆಗಾಗಿ ಉಚಿತ ಆಂಬ್ಯುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು.
ಅಮ್ಮೆಂಬಳ ಕೇಂದ್ರ ಜುಮಾ ಮಸೀದಿ ಖತೀಬ್ ಅಸೈಯ್ಯದ್ ಅಮೀರ್ ತಂಙಳ್ ಹಾಗೂ ಮಜಿ ಮಹಮ್ಮಾಯ ದೇವಸ್ಥಾನದ ಅರ್ಚಕ ಮನೋಹರ್ ಭಟ್, ಮತ್ತು ಚೇಳೂರು ಸಂತ ತೋಮಸ್ ಇಗರ್ಜಿಯ ಧರ್ಮಗುರು ಫಾದರ್ ಮೈಕಲ್ ಡಿಸಿಲ್ವಾ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದರು. ಬಿಂದಾಝ್ ಫ್ರೆಂಡ್ಸ್ ಅಧ್ಯಕ್ಷ ಬದ್ರುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬೋಳಿಯಾರು ಮೊಹಿಯದ್ದೀನ್ ಜುಮಾ ಮಸೀದಿ ಖತೀಬ್ ಅಕ್ರಮ್ ಅಲಿ ತಂಙಳ್, ಕುಕ್ಕೋಟ್ಟು ಗೌಸಿಯ ಜುಮಾ ಮಸೀದಿ ಖತೀಬ್ ಇಸ್ಮಾಯಿಲ್ ಅಸೀಫ್ ಹನೀಫಿ, ಬೋಳಿಯಾರ್ ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ಸಕೂರ್, ಎಸ್ ಡಿಟಿಯು ಮಂಗಳೂರು ನಗರ ಅಧ್ಯಕ್ಷ ರಹಿಮಾನ್ ಬೋಳಿಯಾರ್, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಅಳ್ವ, ಬಂಟರ ಸಂಘದ ಅಧ್ಯಕ್ಷ ಜಯರಾಂ ಶಾಂತ, ತಾ.ಪಂ ಮಾಜಿ ಸದಸ್ಯ ಬಿ.ಕೆ ಜಬ್ಬಾರ್, ಉದ್ಯಮಿ ಸಂಯುಕ್ತ ರೈ ಬೋಳಿಯಾರು, ಬೋಳಿಯಾರು ಗ್ರಾ.ಪಂ ಮಾಜಿ ಅಧ್ಯಕ್ಷ ಸತೀಶ್ ಅಚಾರ್ಯ, ಮಾಜಿ ಸದಸ್ಯರಾದ ಹನೀಫ್ ರಂತಡ್ಕ, ಸಿದ್ದೀಕ್ ಕುಕ್ಕೋಟು, ಸಮಾಜಿಕ ಕಾರ್ಯಕರ್ತ ಅಶ್ರಫ್ ಮೋನು, ಹನೀಫ್ ನಲಿಕೆದಗುಡ್ಡೆ, ಅಬೂಬಕ್ಕರ್ ಪೊಡಿಯಾ, ಬಿಂದಾಝ್ ಸಿರಾಂಬಿ ಕಮಿಟಿ ಮಾಜಿ ಅಧ್ಯಕ್ಷ ಸಲೀಂ ಬೋಳಿಯಾರು, ರಿಝ್ವಾನ್ ಹಾಜಿ, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಮೊಹಮ್ಮದ್ ಬೋಳಿಯಾರ್, ಪಜೀರ್ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮೊಹಮ್ಮದ್ ಪಾನೇಲ, ಬೋಳಿಯಾರು ಜುಮಾ ಮಸೀದಿ ಅಧ್ಯಕ್ಷ ಶರೀಫ್ ಕಾಪಿಕಾಡ್, ಉಪಾಧ್ಯಕ್ಷ ಇಕ್ಬಾಲ್ ದೇವರಗುಂಡಿ, ಗೌಸಿಯ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಎನ್.ಜಿ, ಎಸ್ಡಿಪಿಐ ಬೋಳಿಯಾರು ಅಧ್ಯಕ್ಷ ಸರ್ವಾನ್ ಬೋಳಿಯಾರು, ಕಟ್ಟಡ ಮಾಲಕ ಲಾರೆನ್ಸ್ ಡಿಸೊಜಾ, ಇಬ್ರಾಹಿಂ ಕುರ್ನಾಡ್ ಉಪಸ್ಥಿತರಿದ್ದರು.