”ದಕ್ಷ್ ಪ್ಲೇ ಸ್ಕೂಲ್ ” 2026-27ನೇ ಶೈಕ್ಷಣಿಕ ಸಾಲಿನಿಂದ ಮಕ್ಕಳಿಗೆ ಕೃಷಿ ಕುರಿತು ಪ್ರಾಯೋಗಿಕ ಅಧ್ಯಯನ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ನರ್ಸರಿ , ಎಲ್ ಕೆ ಜಿ , ಯುಕೆಜಿ , ಡೇಕೇರ್ ಮಕ್ಕಳಿಗಾಗಿ ಉಳ್ಳಾಲಬೈಲಿನ ”ದಕ್ಷ್ ಪ್ಲೇ ಸ್ಕೂಲ್ ” 2026-27ನೇ ಶೈಕ್ಷಣಿಕ ಸಾಲಿನಿಂದ ಪುಟಾಣಿ ಮಕ್ಕಳಿಗೆ ಕೃಷಿ ಕುರಿತು ತಳಮಟ್ಟದ ಅಧ್ಯಯನ ನಡೆಸಲು ಫುಡ್ ಚೈನ್ ಕ್ಯಾಂಪೇನ್ (ಕೆ.ವಿ.ಕೆ.) ಮಂಗಳೂರು ಇದರ ಜೊತೆ ಪಾಲುದಾರಿಕೆಯೊಂದಿಗೆ ಈ ಚಟುವಟಿಕೆ ನಡೆಯಲಿದೆ ಎಂದು ದಕ್ಷ್ ಪ್ಲೇ ಸ್ಕೂಲ್ ಉಳ್ಳಾಲ ಇದರ ಫೌಂಡರ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರಾದ ಮಲ್ಲಿಕಾ ಉಳ್ಳಾಲಬೈಲ್ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮಕ್ಕಳ ಕೃಷಿ ಚಟುವಟಿಕೆಗಳು, ಆಹಾರ ಉತ್ಪಾದನಾ ಪ್ರಕ್ರಿಯೆ, ಪರಿಸರ ಸಂರಕ್ಷಣೆ ಹಾಗೂ ಪ್ರಕೃತಿಯ ಮಹತ್ವದ ಬಗ್ಗೆ ಪ್ರಾಯೋಗಿಕ ಮತ್ತು ಮನರಂಜನಾತ್ಮಕ ರೀತಿಯಲ್ಲಿ ಅರಿವು ಮೂಡಿಸುವ ಯೋಜನೆ ರೂಪಿಸಲಾಗಿದೆ . ಇಂದಿನ ಮಕ್ಕಳು ಮೊಬೈಲ್ ಮತ್ತು ಡಿಜಿಟಲ್ ವಾತಾವರಣದ ನಡುವೆ ಹೆಚ್ಚು ಸಮಯ ಕಳೆಯುತ್ತಿರುವ ಹಿನ್ನೆಲೆ ಈ ರೀತಿಯ ಯೋಜನೆ ಉಪಕಾರಿಯಾಗಿದೆ . ಎಲ್‌ಕೆಜಿ, ಯುಕೆಜಿ ಮತ್ತು ನರ್ಸರಿ ತರಗತಿಗಳಲ್ಲಿ ಕಲಿಯುತ್ತಿರುವ ನಾಲ್ಕುರಿಂದ ಐದು ವರ್ಷದ ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಕೃಷಿಯ ಮೂಲಭೂತ ಅರಿವು ಮೂಡಿಸುವ ಈ ವಿನೂತನ ಕಾರ್ಯಕ್ರಮದಿಂದ ಮಕ್ಕಳಲ್ಲಿ ಕೃಷಿಯ ಬಗ್ಗೆ ಅರಿವು ಚಿಕ್ಕ ಪ್ರಾಯದಿಂದಲೇ ಮೂಡಲಿದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಫುಡ್ ಚೈನ್ ಕ್ಯಾಂಪೇನ್ ಮಂಗಳೂರು ಇದರ ಸ್ಥಾಪಕರಾದ ಯತೀಶ್ ತುಕಾರಾಮ್ , ಪ್ರಮುಖರಾದ ಮಾಧವ್ ಉಳ್ಳಾಲ್ , ಸಂದೀಪ್ ಉಳ್ಳಾಲ್ , ಶಿಲ್ಪ ರಾಕೇಶ್ , ಅಶ್ವತ್ ಮಂಜನಾಡಿ ಸಹಿತ ಮತ್ತಿತ್ತರರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!