ಮಂಗಳೂರು: ನೀಟ್, ಯುಜಿಸಿ ನೆಟ್ ಅಕ್ರಮ ವಿರೋಧಿಸಿ ಎಸ್‌ಐಒ ಪ್ರತಿಭಟನೆ

ಮಂಗಳೂರು: ಇತ್ತೀಚೆಗೆ ನಡೆದ ನೀಟ್ ಮತ್ತು ಯುಜಿಸಿ ನೆಟ್ ಪರೀಕ್ಷೆಯಲ್ಲಿ ನಡೆದ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಎಸ್ ಐ ಒ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಕ್ಲಾಕ್ ಟವರ್ ಬಳಿ ಪ್ರತಿಭಟನೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಉನ್ನತ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ವಿಫಲವಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕೆಂದು ಹಾಗೂ ಈ ಅವ್ಯವಹಾರಗಳಲ್ಲಿ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (NTA)ದ ಪಾತ್ರದ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಉಮೇರಾ ಬಾನು (ಮಾಜಿ ರಾಜ್ಯಾಧ್ಯಕ್ಷೆ ,ಜಿ ಐ ಓ ಕರ್ನಾಟಕ) ಮಾತನಾಡಿ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ನಡೆಸುವಲ್ಲಿ ವಿಫಲವಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದರು.ಬ್ರ.ಯಾಸಿನ್ ಫಯಾಜ್ (ಅಧ್ಯಕ್ಷರು ಎಸ್ ಐ ಓ ವಿರಾಸ್ ಕಣ್ಣೂರ್ ) ಪರೀಕ್ಷೆಗಳಲ್ಲಿ ಅಕ್ರಮಗಳನ್ನು ನಡೆಸಿ ವಿದ್ಯಾರ್ಥಿಗಳ ಹಲವು ವರ್ಷಗಳ ಕನಸುಗಳನ್ನು ನುಚ್ಚುನೂರು ಗೊಳಿಸಿದ ಆಡಳಿತ ವರ್ಗವನ್ನು ಟೀಕಿಸಿದರು. ಬ್ರ.ಮುಸ್ತಫಾ (ಜಿಲ್ಲಾಧ್ಯಕ್ಷರು ಎಸ್ಐ ಓ ದಕ್ಷಿಣ ಕನ್ನಡ ) ಅವರು ನೀಟ್ ಪರೀಕ್ಷೆಯಲ್ಲಿನ ವೈಫಲ್ಯತೆಗೆ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಬ್ರ.ಮಹಮ್ಮದ್ ಇಸ್ಲಾಈಲ್ (ಜಿಲ್ಲಾ ಕಾರ್ಯದರ್ಶಿ , ಎಸ್ಐಒ ದಕ್ಷಿಣ ಕನ್ನಡ),ಬ್ರ. ಅಬ್ದುಲ್ಲಾ ಶಾಹಿಲ್ (ಮಾಜಿ ರಾಜ್ಯ ಕಾರ್ಯದರ್ಶಿ ಎಸ್ಐಒ ಕರ್ನಾಟಕ), ಬ್ರ.ಇಸ್ಮಾಯಿಲ್ ಇಲ್ಹಾಮ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!