ಮಾಸ್ಟರ್ಸ್ ಕ್ಲಬ್ 15 ನೇ ವಾರ್ಷಿಕೋತ್ಸವ ಕಾರ್ಯಕ್ರಮ

ಮೀಯಪದವು : ಮೀಯಪದವಿನ ಪ್ರತಿಷ್ಠಿತ ಕ್ರೀಡೆ ಹಾಗೂ ಸಾಂಸ್ಕೃತಿಕ ಸಂಘಟನೆಯಾದ ಮಾಸ್ಟರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ.) ವತಿಯಿಂದ 15ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ನಾರಾಯಣೀಯಂ ವೇದಿಕೆಯಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.

ಕಾರ್ಯಕ್ರಮದ ಅಂಗವಾಗಿ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಮಾಜಿ ಸದಸ್ಯರಾದ ಕೆ.ವಿ ರಾಧಾಕೃಷ್ಣ ಭಟ್ ವಹಿಸಿದ್ದರು. ಕಾರ್ಯಕ್ರಮಕ್ಕೆ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಶಾರದಾ ಗಣಪತಿ ವಿದ್ಯಾಕೇಂದ್ರ ಕೈರಂಗಳದ ಸಂಚಾಲಕರಾದ ರಾಜಾರಾಮ ಭಟ್,ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಐಲ ಇದರ ಮೊಕ್ತೇಸರರಾದ ನಾರಾಯಣ ಹೆಗ್ಡೆ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಜ್ಯೋತಿ ಪಿ. ರೈ,ವಿ.ಎ.ಯು.ಪಿ.ಎಸ್ ಮೀಯಪದವಿನ ಆಡಳಿತ ಸಲಹೆಗಾರರಾದ ಶ್ರೀಧರ ರಾವ್ ಆರ್.ಎಂ., ಎಸ್.ವಿ.ವಿ.ಎಚ್.ಎಸ್.ಎಸ್ ಮೀಯಪದವಿನ ಸಂಚಾಲಕರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, CAMPCO ನಿರ್ದೇಶಕಿ ಸೌಮ್ಯ ಪ್ರಕಾಶ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ 2024-25ನೇ ಸಾಲಿನ ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ಜಗದೀಶ್ ಶೆಟ್ಟಿ ಎಲಿಯಾಣ, ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ ತುಳುನಾಡ ರತ್ನ ದಿನೇಶ್ ಅತ್ತಾವರ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟ ಪೂರ್ವ ಸದಸ್ಯರು,ಬರಹಗಾರರಾದ ಯೋಗೀಶ್ ರಾವ್ ಚಿಗುರುಪಾದೆ ಹಾಗೂ ಅಂತಾರಾಷ್ಟ್ರೀಯ ತ್ರೋಬಾಲ್ ಆಟಗಾರ ಬಸವರಾಜ್ ಇವರನ್ನು ಗೌರವಿಸಲಾಯಿತು.

ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಬಡ್ಡಿ, ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾಟದ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.

ಎಸ್.ವಿ.ವಿ.ಎಚ್ ಎಸ್ ಎಸ್ ಶಾಲೆಯ ಅಧ್ಯಾಪಕರಾದ ಬ್ರಿಜೇಶ್ ಪ್ರಾರ್ಥನೆ ಹಾಡಿದರು.ಮಾಸ್ಟರ್ಸ್ ಕ್ಲಬ್ ಗೌರವಾಧ್ಯಕ್ಷರಾದ ಶ್ರೀ ಪುಷ್ಪರಾಜ್ ಶೆಟ್ಟಿ ತಲೇಕಳ ಸ್ವಾಗತಿಸಿ, ಕ್ಲಬ್ ಸದಸ್ಯ ರಘುವೀರ್ ರಾವ್ ವಂದಿಸಿದರು.ಕಾರ್ಯಕ್ರಮವನ್ನು ಎಸ್.ವಿ.ವಿ.ಎಚ್ ಎಸ್ ಎಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ರಾಜಾರಾಮ್ ರಾವ್ ಹಾಗೂ ಕಿರಣ್ ಭಟ್ ಚಂಡಿತೋಟ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ“ದುಂಬಿ ಮೆಲೋಡೀಸ್” ಮಂಜೇಶ್ವರ ತಂಡದ ನೇತೃತ್ವದಲ್ಲಿ ಹೆಜ್ಜೆನಾದ ಹಾಗೂ ಪ್ರಸಿದ್ಧ ಹಿನ್ನಲೆ ಗಾಯಕರ ನೃತ್ಯ ಗಾನ ಕಾರ್ಯಕ್ರಮ,ಶ್ರೀ ಮಹಾಲಿಂಗೇಶ್ವರ ಮಕ್ಕಳ ಕುಣಿತ ಭಜನಾ ಕಾರ್ಯಕ್ರಮ, ಮಹಾಕಾಳಿ ತಂಡ ಮೀಯಪದವು ಇವರಿಂದ ಕೈ ಕೊಟ್ಟಿ ಕಳಿ ಕಾರ್ಯಕ್ರಮ ಹಾಗೂ ಕುಮಾರಿ ಶರಣ್ಯ ಕಳ್ಳಿಗೆ ಇವರಿಂದ ನೃತ್ಯ ಕಾರ್ಯಕ್ರಮ ಜರಗಿತು.
ನಂತರ ಕಾಪು ರಂಗತರಂಗ ಕಲಾವಿದರಿಂದ “ಶೋಬಾಜಿ” ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡು ಜನಮನ ಸೂರೆಗೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!