ಬಂಟ್ವಾಳ: ಕಡೇಶಿವಾಲಯದಿಂದ ಮಣಿನಾಲ್ಕೂರು ಗ್ರಾಮವನ್ನು ಸಂಪರ್ಕ ಮಾಡುವ “ಕಡೇಶಿವಾಲಯ- ಅಜಿಲಮೊಗರು” ಸೌಹಾರ್ದ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವಾಗಿ ಉದ್ಘಾಟನೆಯಾಗಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.ಇದರ ಪೂರ್ವಭಾವಿಯಾಗಿ ಸೇತುವೆಯ ಕಾಮಗಾರಿ ವೀಕ್ಷಿಸಲು ಸ್ಥಳಕ್ಕೆ ಭೇಟಿ ಈ ವಿಚಾರವಾಗಿ ಮಾತನಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಡೇಶಿವಾಲಯ ಮತ್ತು ಮಣಿನಾಲ್ಕೂರು ಗ್ರಾಮದ ಸಂಪರ್ಕದ ಕಡೇಶಿವಾಲಯ- ಅಜಿಲಮೊಗರು ಸೇತುವೆ ಬಗ್ಗೆ ಅನೇಕ ವರ್ಷಗಳ ಬೇಡಿಕೆಯಾಗಿತ್ತು. ಕಡೇಶಿವಾಲಯ ದೇವಸ್ಥಾನ ಹಾಗೂ ಅಜಿಲಮೊಗರು ಮಸೀದಿಯನ್ನು ಸಂಪರ್ಕ ಮಾಡುವ ಸೌಹಾರ್ದ ಸೇತುವೆ 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಏಳು ವರ್ಷ ಕಳೆಯಿತು. ಶಾಸಕನಾಗಿದ್ದರೆ ಕೂಡಲೇ ಮಾಡುತ್ತಿದ್ದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಂಟ್ವಾಳ ಅಭಿವೃದ್ಧಿಯಾಗಿದೆ. ಶಾಸಕರ ನಿಧಿಯನ್ನು ಬಳಸಿಕೊಂಡು ಅಭಿವೃದ್ಧಿ ಮಾಡುವುದು ದೊಡ್ಡ ವಿಚಾರವಲ್ಲ. ವಿಶೇಷ ಅನುದಾನದ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡುವುದು ಸಾಧನೆ ಎಂದರು .
5 ಸಾವಿರ ಕೋಟಿಗಿಂತಲೂ ಮಿಕ್ಕಿ ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ.
94 ಸಿ. ಹಕ್ಕುಪತ್ರ ನೀಡುವ ಕಾರ್ಯ ರಾಜ್ಯದಲ್ಲಿ ಪ್ರಥಮವಾಗಿ ಮಾಡಿದ್ದೇನೆ. ಶಾಸಕನಾಗಿರುತ್ತಿದ್ದರೆ ಬಾಕಿಯಾಗಿದ್ದ ಅನೇಕ ಕಾಮಗಾರಿಗಳನ್ನು ಮಾಡುತ್ತಿದೆ, ಅ ನೋವು ನನಗಿದೆ. ಶಾಸಕನಾಗಿ ಇರದೆ ಇರುವುದು ಇದಕ್ಕೆ ಕಾರಣ. ಆದರೆ ಮತ್ತೆ ಕಾಂಗ್ರೆಸ್ ಸರಕಾರ ಬಂದ ಮೇಲೆ ಸೇತುವೆ ಪೂರ್ಣಗೊಳಿಸಲು ಸಾಧ್ಯವಾಯಿತು. ಇನ್ನು ಪಿಡಬ್ಲೂಡಿ ಹಾಗೂ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಈ ಸೇತುವೆ ಉದ್ಘಾಟನೆಯಾಗಲಿದೆ. ಬಹಳ ಪ್ರಾಮುಖ್ಯತೆ ಇರುವ ಮತ್ತು ಬಹುಬೇಡಿಕೆಯ ಸೇತುವೆಯಾಗಿ ಮೂಡಿಬರಲಿದೆ ಎಂದು ತಿಳಿಸಿದರು.
ಈ ಸಂದರ್ಭ ಬೀಜ ಮತ್ತು ಸಾವಯವ ಪ್ರಮಾಣಿಕರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಕಾಂಗ್ರೆಸ್ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ್ ಜೈನ್, ಅಬ್ಬಾಸ್ ಆಲಿ, ಸಂಪತ್ ಕುಮಾರ್, ಶಿವಪ್ಪ ಪೂಜಾರಿ ಹಟ್ಟತಡ್ಕ, ಕಾಂಚಲಾಕ್ಷಿ, ಪೂವಪ್ಪ ಪೂಜಾರಿ, ಚೆರಿಮೋನು,ಮಹಮ್ಮದ್, ಅಬ್ಬಾಸ್, ಸುರೇಶ್ ಜೋರಾ,ನವೀನ, ಯೂನಸ್, ರಜಾಕ್, ಆದಂ ಕುಂಜ್ಞಿ, ಸಾದಿಕ್ , ಅಬ್ದುಲ್ ರಜಾಕ್, ಸಂಜೀವ ಪೂಜಾರಿ, ಹಕೀಮ್, ಸಾಹುಲ್ ,ಸಫೀಕ್ ಮತ್ತಿತರರು ಉಪಸ್ಥಿತರಿದ್ದರು.