ಮಂಗಳೂರು: ಯುವಜನತೆ ಹಾಗೂ ಕುಟುಂಬಗಳಿಗಾಗಿ ವಿಶೇಷವಾಗಿ ಆಯೋಜಿಸಲಾಗಿರುವ “ಫಂಟೋಪಿಯಾ – ಮೆಗಾ ಮನರಂಜನಾ ಉತ್ಸವ 2026” ಕಾರ್ಯಕ್ರಮವು ಮೇ 24ರಂದು ನಗರದ ಕದ್ರಿ ಪಾರ್ಕ್ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಪ್ರೆಸಿಡೆನ್ಸಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ರಾಘವೇಂದ್ರ ಶೆಣೈ ತಿಳಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವು ಸಂಜೆ 4ರಿಂದ ರಾತ್ರಿ 8ರವರೆಗೆ ನಡೆಯಲಿದೆ . ಈ ಸಮಾರಂಭಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು .
ಗೌರವ ಅತಿಥಿಗಳಾಗಿ ಕಾರ್ಪೊರೇಟರ್ ಮನೋಹರ್ ಶೆಟ್ಟಿ, ಕದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಜ್ಯೋತಿ ಬಿ., ನಟಿಯರಾದ ಶೈಲಶ್ರೀ ಮೂಲ್ಕಿ ಹಾಗೂ ವೆನ್ಸಿಟಾ ಡಯಾಸ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮನರಂಜನಾ ಚಟುವಟಿಕೆಗಳು, ಯುವಜನರಿಗಾಗಿ ವಿವಿಧ ಸ್ಪರ್ಧೆಗಳು, ಆಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದೆ. ಎಲ್ಲಾ ವಯೋಮಾನದವರಿಗೂ ಮನಸೂರೆಗೊಳ್ಳುವ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ನ ಸಹಾಯಕ ನಿರ್ದೇಶಕ ಡಾ. ಅರುಣ್ ದೇವರಾಜ್ , ಪ್ರೆಸಿಡೆನ್ಸಿ ಶಾಲೆಯ ಪ್ರಾಂಶುಪಾಲೆ ಮಿಸ್ ಶೈಲಾ ಸಲ್ಡಾನ್ಹಾ ,
ಮಾರುಕಟ್ಟೆ ಮುಖ್ಯಸ್ಥರಾದ ಜಗನ್ನಾಥ ಶೆಟ್ಟಿ ,ಕನ್ನಡ ಪ್ರಾಧ್ಯಾಪಕರಾದ ಶರತ್ ಕೆಕೆ ,ಮಾರ್ಕೆಟಿಂಗ್ ತಂಡದ ಸದಸ್ಯರಾದ ಸುಧೀಶ, ವರ್ಷ ಉಪಸ್ಥಿತರಿದ್ದರು