ಗೇರು ಮೇಳದಲ್ಲಿ ಕಲಾಕೃತಿಗಳ ಪ್ರದರ್ಶನಕ್ಕೆ ಗಣ್ಯರಿಂದ ಸನ್ಮಾನ
ಮಂಗಳೂರು: ಬೊಂದೆಲ್‌ನ ಸೈಂಟ್ ಲಾರೆನ್ಸ್ ಶಾಲೆ ಯ 3ನೇ ತರಗತಿ ವಿದ್ಯಾರ್ಥಿನಿ ಫಾತಿಮಾ ಝೋಯಾ ಇತ್ತೀಚೆಗೆ ಮಂಗಳೂರಿನ Kadri Park ನಲ್ಲಿ ನಡೆದ ಗೇರು ಮೇಳದಲ್ಲಿ ತನ್ನ “Birds on Canvas” ಕಲಾಕೃತಿಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಅವಳ ಸೃಜನಶೀಲತೆ ಮತ್ತು ಪರಿಶ್ರಮವನ್ನು ಗುರುತಿಸಿ ಪದ್ಮರಾಜ ಅರ್, ತಾರಾನಾಥ ಗಟ್ಟಿ, ಮಮತ ಎಸ್ ಗಟ್ಟಿ ಹಾಗೂ ಪುಷ್ಪರಾಜ್ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿ ಸನ್ಮಾನಿಸಿದರು.
ಬಾಲ್ಯದಿಂದಲೇ ಪ್ರಕೃತಿ ಮತ್ತು ಪಕ್ಷಿಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಫಾತಿಮಾ ಝೋಯಾ, ತನ್ನ ಪ್ರಕೃತಿ ಪ್ರೀತಿಯನ್ನು ಕಲಾತ್ಮಕವಾಗಿ ಅಭಿವ್ಯಕ್ತಗೊಳಿಸುವ ಉದ್ದೇಶದಿಂದ “Birds on Canvas” ಎಂಬ ವಿಶಿಷ್ಟ ಕಲಾಪ್ರದರ್ಶನವನ್ನು ಆಯೋಜಿಸಿದ್ದಾಳೆ.
ಅವಳ ಪ್ರತಿಭೆಯನ್ನು ಬೆಳೆಸುವಲ್ಲಿ ತಂದೆ ಝುಬೇರ್ ಖಾನ್ ಕುಡ್ಲಾ ಹಾಗೂ ತಾಯಿ ತೈಬಾ ಬಾಜಿ ಅವರ ಪ್ರೋತ್ಸಾಹ ಮತ್ತು ಬೆಂಬಲ ಪ್ರಮುಖ ಪಾತ್ರವಹಿಸಿದೆ.
ಖ್ಯಾತ ಕಲಾವಿದ ದಿನೇಶ್ ಹೊಳ್ಳ ಅವರ ಮಾರ್ಗದರ್ಶನ ಮತ್ತು ಪ್ರೇರಣೆ ಫಾತಿಮಾ ಝೋಯಾಳ ಕಲಾ ಪಯಣಕ್ಕೆ ಮತ್ತಷ್ಟು ಬಲ ನೀಡಿದ್ದು, ಅವಳ ಆತ್ಮವಿಶ್ವಾಸ ಮತ್ತು ಸೃಜನಶೀಲತೆಯನ್ನು ವೃದ್ಧಿಸಿದೆ.
ಫಾತಿಮಾ ಝೋಯಾ ವಿವಿಧ ಚಿತ್ರಕಲೆ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳು ಮತ್ತು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ.