ಲಯನ್ಸ್ ಜಿಲ್ಲಾ ಅವಾರ್ಡ್ ನೈಟ್‌ನಲ್ಲಿ ಲಯನ್ ಸುದರ್ಶನ್ ಪಡಿಯಾರ್‌ಗೆ ಬಹು ಪ್ರಶಸ್ತಿಗಳ ಗೌರವ

ಮಂಗಳೂರು: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ವ್ಯಾಪ್ತಿಯ ಹಾಸನ, ಚಿಕ್ಕಮಗಳೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಲಯನ್ಸ್ ಕ್ಲಬ್‌ಗಳಿಗಾಗಿ ಆಯೋಜಿಸಿದ್ದ “ಧನ್ಯೋಸಿ ಜಿಲ್ಲಾ ಅವಾರ್ಡ್ ನೈಟ್” ಕಾರ್ಯಕ್ರಮದಲ್ಲಿ ಲಯನ್ ಸುದರ್ಶನ್ ಪಡಿಯಾರ್ ವಿಟ್ಲ ಅವರಿಗೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲ ಲಯನ್ ಕುಡುಪಿ ಅರವಿಂದ್ ಶೆಣೈ ಅವರು ಜಿಲ್ಲೆಯ ಬೆಸ್ಟ್ ಪಿಆರ್‌ಒ (Best PRO), ರೋರಿಂಗ್ ಲಯನ್ ಆಫ್ ದ ಇಯರ್ (Roaring Lion of the Year), ಇಂಟರ್ನ್ಯಾಷನಲ್ ಪ್ರೆಸಿಡೆಂಟ್ ಪಿನ್ ಹಾಗೂ ಇಂಟರ್ನ್ಯಾಷನಲ್ ಪ್ರೆಸಿಡೆಂಟ್ ಮೆಡಲ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪ್ರದಾನ ಮಾಡಿ ಸನ್ಮಾನಿಸಿದರು.

ಲಯನ್ ಸುದರ್ಶನ್ ಪಡಿಯಾರ್ ಅವರು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅವರ ಗಣನೀಯ ಸೇವೆಯನ್ನು ಪರಿಗಣಿಸಿ ಈ ಗೌರವಗಳು ಲಭಿಸಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!