ಜೆ. ಕೊರಗಪ್ಪ ಅವರಿಗೆ ‘ಸೇವಾ ತ್ರಿವಿಕ್ರಮ’ ಬಿರುದು ಪ್ರದಾನ

ಮಂಗಳೂರುದಲ್ಲಿ ನಡೆದ ಸಮಾರಂಭದಲ್ಲಿ ಸಮಾಜಸೇವಕ ಜೆ. ಕೊರಗಪ್ಪ ಅವರಿಗೆ “ಸೇವಾ ತ್ರಿವಿಕ್ರಮ” ಬಿರುದು ಪ್ರದಾನ ಮಾಡಿ ಗೌರವಿಸಲಾಯಿತು.

ರಿಯಲ್ ಎಸ್ಟೇಟ್ ಸಂಸ್ಥೆ ಲ್ಯಾಂಡ್ ಲಿಂಕ್ಸ್ ರೂವಾರಿ ಹಾಗೂ ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರ ಮುಂದಾಳತ್ವದಲ್ಲಿ ಮೇರಿಹಿಲ್‌ನಲ್ಲಿ ನಿರ್ಮಾಣಗೊಂಡ ಪಾಲೆಮಾರ್ ಕನ್ವೆಷನ್ ಸೆಂಟರ್ ಸೇರಿದಂತೆ ನಾಲ್ಕು ಸಭಾಂಗಣಗಳ ಲೋಕಾರ್ಪಣೆ ಕಾರ್ಯಕ್ರಮದ ವೇಳೆ ಈ ಗೌರವ ಪ್ರದಾನ ಮಾಡಲಾಯಿತು.

ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟೀಸ್ ಎಸ್. ಅಬ್ದುಲ್ ನಝೀರ್ ಅವರ ದಿವ್ಯಹಸ್ತದಲ್ಲಿ ಜೆ. ಕೊರಗಪ್ಪ ಅವರಿಗೆ ಗೌರವಾಭಿನಂದನ ಪತ್ರ ಹಾಗೂ “ಸೇವಾ ತ್ರಿವಿಕ್ರಮ” ಬಿರುದು ನೀಡಿ ಸನ್ಮಾನಿಸಲಾಯಿತು.

ಜೆ. ಕೊರಗಪ್ಪ ಅವರು ದೇರೆಬೈಲ್ ಕೊಂಚಾಡಿಯ ವಿದ್ಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಚಾಲಕರಾಗಿ, ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಕಾರ್ಯನಿರ್ವಹಣೆಯಲ್ಲಿ, ಕಡೆಕಾರು ಶ್ರೀ ಮಲ್ಲಿಕಾರ್ಜುನ ದೇವಾಲಯದ ಟ್ರಸ್ಟಿಯಾಗಿ ಹಾಗೂ ಗುರುವನ ಶ್ರೀ ದುರ್ಗಾ ಕ್ಷೇತ್ರದ ಕಾರ್ಯದರ್ಶಿ ಮತ್ತು ಟ್ರಸ್ಟಿಯಾಗಿ ಹಲವು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ವಿ. ಸೋಮಣ್ಣ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಐವನ್ ಡಿ ಸೋಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!