ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತ ಸಾಗರ: ಒಂದೇ ದಿನ 30 ಸಾವಿರಕ್ಕೂ ಅಧಿಕ ಭಕ್ತರ ದರ್ಶನ

ದಕ್ಷಿಣ ಭಾರತದ ಹೆಸರಾಂತ ನಾಗರಾಧನೆಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ರವಿವಾರ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ 30,000 ಕ್ಕಿಂತಲೂ ಅಧಿಕ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ,ತೀರ್ಥ ಪ್ರಸಾದ ಹಾಗೂ ಭೋಜನ ಸ್ವೀಕರಿಸಿರುವರು. ಮುಂಜಾನೆಯಿಂದಲೇ ಪವಿತ್ರ ತೀರ್ಥ ಸ್ನಾನಕ್ಕಾಗಿ ಕುಮಾರಧಾರ ಸ್ನಾನ ಘಟ್ಟದಲ್ಲಿ ಭಕ್ತರು ಮಿಂದು ಶ್ರೀ ದೇವಳದ ಹೊರಾಂಗಣ ಪ್ರವೇಶಿಸಿ ಸರತಿಯ ಸಾಲಿನಲ್ಲಿ ಶ್ರೀ ದೇವರ ದರ್ಶನ ಮಾಡಿರುವರು.

ಭಕ್ತರಿಗೆ ಲಡ್ಡು ಪ್ರಸಾದ ಹಾಗೂ ಪಂಚಕಜ್ಜಾಯ ತೀರ್ಥ ಬಾಟಲಿ ಇತ್ಯಾದಿಗಳಿಗಾಗಿ ಶ್ರೀ ದೇವಳದ ಹೊರ ಭಾಗದಲ್ಲಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ಭೋಜನಕ್ಕಾಗಿ ಶ್ರೀದೇವಳದ ಷಣ್ಮುಖ ಭೋಜನ ಶಾಲೆ, ಹಾಗೂ ಬಫೆ ವ್ಯವಸ್ಥೆಯನ್ನು ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.


ಶನಿವಾರ ರಾತ್ರಿ ಇಂದಲೇ ಶ್ರೀ ಕ್ಷೇತ್ರಕ್ಕೆ ಭಕ್ತರು ಆಗಮಿಸಿ ಶ್ರೀ ದೇವಳದ ವಸತಿಗೃಹ ಹಾಗೂ ಖಾಸಗಿ ವಸತಿ ಗೃಹ ಗಳಲ್ಲಿ ವಾಸ್ತವ್ಯ ಹೂಡಿದ್ದರು. ಇತ್ತ ಈ ದೇವಳದ ಪರಿಸರದಲ್ಲಿರುವ ಪಾರ್ಕಿಂಗ್ ಪ್ರದೇಶಗಳು ಸವಾರಿ ಮಂಟಪದ ಸಮೀಪ, ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಮುಂಬಾಗದ ಪ್ರದೇಶ ಹಾಗೂ ಆದಿ ಸುಬ್ರಮಣ್ಯದ ಇಕ್ಕ ಲೆಗಳಲ್ಲಿ ವಾಹನಗಳು ತುಂಬಿದ್ದವು.

ಆದಿ ಸುಬ್ರಹ್ಮಣ್ಯಕ್ಕೆ ತೆರಳಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಕ್ತರಿಗೆ ತೊಂದರೆ ಆಗದ ಹಾಗೆ ಹಾಗೂ ಸುಗಮ ದರ್ಶನ ತೀರ್ಥ ಪ್ರಸಾದ ಭೋಜನಕ್ಕಾಗಿ ವ್ಯವಸ್ಥೆಗಳನ್ನು ಮಾಡಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!