ಮಂಗಳೂರು, ಜೂನ್ 3:
ನಗರದ ಕಣ್ಣೂರು ವೀರನಗರ ನಿವಾಸಿಯಾದ 59 ವರ್ಷದ ಸುರೇಶ್ ಅವರು ಮೇ 29ರಂದು ಕಾಣೆಯಾಗಿರುವ ಘಟನೆ ವರದಿಯಾಗಿದೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಕಾಣೆಯಾದ ಸುರೇಶ್ ಅವರ ವೈಶಿಷ್ಟ್ಯಗಳು ಹೀಗಿವೆ: ಸುಮಾರು 5.5 ಅಡಿ ಎತ್ತರ, ಕಪ್ಪು ಮೈಬಣ್ಣ, ದುಂಡು ಮುಖ ಹಾಗೂ ಸಪೂರ ದೇಹ ಹೊಂದಿದ್ದಾರೆ. ಅವರ ಹಣೆಯ ಬಲಭಾಗದಲ್ಲಿ ಕಪ್ಪು ಮಚ್ಚೆ ಇರುವುದೂ ಗುರುತು. ಅವರು ಕೊನೆಯಾಗಿ ಕಾಣಿಸಿಕೊಂಡಾಗ ಕೆಂಪು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.
ಸುರೇಶ್ ಅವರಿಗೆ ಹಿಂದಿ, ಕನ್ನಡ ಮತ್ತು ತುಳು ಭಾಷೆಗಳು ಬರುತ್ತವೆ ಎಂದು ತಿಳಿದುಬಂದಿದೆ.
ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ತಕ್ಷಣ ಕಂಕನಾಡಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.