ಯೂನಿವರ್ಸಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪ್ರವೇಶಾತಿ ಪ್ರಕ್ರಿಯೆ ಆರಂಭ

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಪ್ರಾಯೋಗಿಕ ತರಬೇತಿ ಹಾಗೂ ಉದ್ಯಮ ಸಂಪರ್ಕದೊಂದಿಗೆ ವೃತ್ತಿಪರ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿವಿಧ ಸಂಯೋಜಿತ ಕೋರ್ಸ್‌ಗಳನ್ನು ಕಾಲೇಜು ನೀಡುತ್ತಿದೆ. ಪತ್ರಿಕೋದ್ಯಮ ವಿಭಾಗದಲ್ಲಿ ಇಂಗ್ಲಿಷ್ (ಐಚ್ಛಿಕ), ಪತ್ರಿಕೋದ್ಯಮ ಮತ್ತು ಅರ್ಥಶಾಸ್ತ್ರ; ಕನ್ನಡ (ಐಚ್ಛಿಕ), ಪತ್ರಿಕೋದ್ಯಮ ಮತ್ತು ಅರ್ಥಶಾಸ್ತ್ರ; ಹಿಂದಿ (ಐಚ್ಛಿಕ), ಪತ್ರಿಕೋದ್ಯಮ ಮತ್ತು ಅರ್ಥಶಾಸ್ತ್ರ; ಇತಿಹಾಸ, ಅರ್ಥಶಾಸ್ತ್ರ ಮತ್ತು ಪತ್ರಿಕೋದ್ಯಮ ಸೇರಿದಂತೆ ವಿವಿಧ ಸಂಯೋಜನೆಗಳ ಕೋರ್ಸ್‌ಗಳು ಲಭ್ಯವಿವೆ.

ವಿದ್ಯಾರ್ಥಿಗಳಿಗೆ ಅನುಭವಿ ಬೋಧಕ ವರ್ಗ, ಪ್ರಾಯೋಗಿಕ ತರಬೇತಿ, ಆಧುನಿಕ ನ್ಯೂಸ್‌ರೂಂ ಅನುಭವ, ಇಂಟರ್ನ್‌ಶಿಪ್ ಹಾಗೂ ಮಾಧ್ಯಮ ಕ್ಷೇತ್ರದೊಂದಿಗೆ ನೇರ ಸಂಪರ್ಕದ ಅವಕಾಶಗಳನ್ನು ಒದಗಿಸಲಾಗುತ್ತಿದೆ ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ. ಪತ್ರಿಕೋದ್ಯಮ ಪದವೀಧರರಿಗೆ ಸುದ್ದಿ ವರದಿಗಾರರು, ಟಿವಿ ನಿರೂಪಕರು, ಪತ್ರಿಕೆ ಹಾಗೂ ನಿಯತಕಾಲಿಕೆ ಪತ್ರಕರ್ತರು, ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳು, ಸಾಮಾಜಿಕ ಜಾಲತಾಣ ನಿರ್ವಾಹಕರು, ವಿಡಿಯೋ ನಿರ್ಮಾಪಕರು, ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಕಾರ್ಪೊರೇಟ್ ಸಂವಹನ ತಜ್ಞರು, ರೇಡಿಯೋ ಜಾಕಿಗಳು, ಪಾಡ್‌ಕಾಸ್ಟ್ ನಿರೂಪಕರು ಹಾಗೂ ತನಿಖಾ ಪತ್ರಕರ್ತರಾಗಿ ವೃತ್ತಿ ಅವಕಾಶಗಳು ಲಭ್ಯವಿವೆ ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!