ಮಂಗಳೂರು: ಪಶ್ಚಿಮ ಬಂಗಾಳ ಮೂಲದ 21 ವರ್ಷದ ಹಸೀನಾ ಖತೂನ್ ಅವರು ಮೇ 29ರಂದು ಕಾಣೆಯಾಗಿರುವ ಘಟನೆ ವರದಿಯಾಗಿದೆ. ಅವರು ಜೋಕಟ್ಟೆ ಹಳೇ ಮಸೀದಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಹಸೀನಾ ಖತೂನ್ ಅವರ ಎತ್ತರ ಸುಮಾರು 5 ಅಡಿ 2 ಇಂಚು ಇದ್ದು, ಸಾಧಾರಣ ಶರೀರ, ಬಿಳಿ ಮೈಬಣ್ಣ ಹಾಗೂ ದುಂಡು ಮುಖ ಹೊಂದಿದ್ದಾರೆ. ಅವರ ಎಡ ತುಟಿಯ ಕೆಳಭಾಗದಲ್ಲಿ ಕಪ್ಪು ಎಳ್ಳುಮಚ್ಚೆ ಇದೆ.
ಕಾಣೆಯಾದ ದಿನ ಅವರು ಕಪ್ಪು ಬಣ್ಣದ ಜೀನ್ಸ್ ಹಾಗೂ ಕೆಂಪು ಬಣ್ಣದ ಟಾಪ್ ಧರಿಸಿದ್ದರು. ಅವರಿಗೆ ಬಂಗಾಳಿ ಮತ್ತು ಹಿಂದಿ ಭಾಷೆಗಳು ಮಾತನಾಡಲು ಬರುತ್ತವೆ ಎಂದು ತಿಳಿದುಬಂದಿದೆ.
ಹಸೀನಾ ಖತೂನ್ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಪಣಂಬೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.