ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರತಿಯೊಂದು ನೀತಿಗಳು ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆಯೇ ಹೊರತು ಈ ದೇಶದ ದುಡಿಯುವ ವರ್ಗದಲ್ಲ. ಇದರಿಂದಾಗಿ ಸಮಾಜದಲ್ಲಿ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕ ವರ್ಗ ತೀವ್ರ ಸಂಕಷ್ಟಕ್ಕೊಳಗಾಗಿದೆ ಹಾಗೂ ಬದುಕು ವಿನಾಶದತ್ತ ಸಾಗುತ್ತಿದೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ತೊಕ್ಕೋಟುರವರು ಅಭಿಪ್ರಾಯಪಟ್ಟರು.
ಅವರು ಕಳೆದ ಎರಡು ದಿನಗಳಿಂದ ಕುತ್ತಾರ್ ನಲ್ಲಿರುವ ಮುನ್ನೂರು ಯುವಕ ಮಂಡಲದಲ್ಲಿ ಜರುಗಿದ CPIM ಉಳ್ಳಾಲ ವಲಯ ಮಟ್ಟದ ಅಧ್ಯಯನ ಶಿಬಿರವನ್ನು ಸಮಾರೋಪಗೊಳಿಸುತ್ತಾ ಈ ಮಾತುಗಳನ್ನು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ CPIM ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳರವರು ಮಾತನಾಡಿ,ದ.ಕ.ಜಿಲ್ಲೆಯ ರಾಜಕಾರಣ ಉಳ್ಳವರ ಪರವಾಗಿ ವ್ಯವಸ್ಥಿತವಾಗಿ ಮುಂದುವರಿಯುತ್ತಿದ್ದು, ಅಭಿವೃದ್ಧಿ ಹಾಗೂ ಸೌಹಾರ್ದತೆಯ ಪ್ರಶ್ನೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರು ಕೊಡುಕೊಳ್ಳುವಿಕೆಯಲ್ಲಿಯೇ ಮಗ್ನರಾಗಿದ್ದಾರೆ.ಆದರೆ ಇಲ್ಲಿನ ಸಾಮಾನ್ಯ ಜನತೆಯ ಶಿಕ್ಷಣ ಉದ್ಯೋಗ, ಆರೋಗ್ಯದ ಸೇರಿದಂತೆ ಬದುಕಿನ ಪ್ರಶ್ನೆಯಲ್ಲಿ ಮಾತನಾಡಲು ಇವರಿಬ್ಬರಿಗೂ ಆಸಕ್ತಿ ಇಲ್ಲವಾಗಿದೆ.ಕಮ್ಯುನಿಸ್ಟ್ ಪಕ್ಷ ಮಾತ್ರವೇ ಅತ್ಯಂತ ಹಿಂದುಳಿದ,ಶೋಷಿತರ,ಬಡವರ ಪರವಾಗಿ ಗಟ್ಟಿ ಧ್ವನಿಯನ್ನು ಮೊಳಗಿಸುತ್ತದೆ.ಆರೋಗ್ಯ ಕ್ಷೇತ್ರವನ್ನೇ ಮಾರಲು ಹೊರಟ ರಾಜ್ಯ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಹಾಗೂ ಆರೋಗ್ಯ ಸಚಿವರ ದುರಂಹಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಸಮರಶೀಲ ಹೋರಾಟವನ್ನು ರೂಪಿಸಲು CPIM ಸಜ್ಜಾಗಿದೆ ಎಂದು ಹೇಳಿದರು
ಸಭೆಯ ಅಧ್ಯಕ್ಷತೆಯನ್ನು CPIM ಹಿರಿಯ ನಾಯಕರಾದ ಸುಂದರ ಕುಂಪಲರವರು ವಹಿಸಿದ್ದರು. ವೇದಿಕೆಯಲ್ಲಿ CPIM ಹಿರಿಯ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಪದ್ಮಾವತಿ ಶೆಟ್ಟಿ,CPIM ಜಿಲ್ಲಾ ಸಮಿತಿ ಸದಸ್ಯರಾದ ಶೇಖರ್ ಕುಂದರ್,ಜಯಂತ ನಾಯಕ್, ರಫೀಕ್ ಹರೇಕಳ,CPIM ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಉಪಸ್ಥಿತರಿದ್ದರು