ದಕ್ಷಿಣ ಕನ್ನಡದಲ್ಲಿ ಮಳೆ ಚುರುಕು; ಜೂನ್ 10ರಿಂದ ಮುಂಗಾರು ಮತ್ತಷ್ಟು ಬಿರುಸು ಸಾಧ್ಯತೆ

ಮಂಗಳೂರು, ಜೂನ್ 9: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ಮೋಡಕವಿದ ವಾತಾವರಣದ ನಡುವೆ ಬಿಟ್ಟು ಬಿಟ್ಟು ಮಳೆಯಾಗಿದೆ. ಸಂಜೆ ವೇಳೆಗೆ ಬೆಳ್ತಂಗಡಿ, ಸುಳ್ಯ ಹಾಗೂ ಪುತ್ತೂರು ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಮಂಗಳೂರು, ಉಳ್ಳಾಲ, ಬಂಟ್ವಾಳ ಮತ್ತು ಮೂಲ್ಕಿ ತಾಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದೆ.

ಜಿಲ್ಲೆಯಲ್ಲಿ ರವಿವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನವರೆಗೆ ಸರಾಸರಿ 10.5 ಮಿ.ಮೀ. ಮಳೆ ದಾಖಲಾಗಿದೆ. ಕಡಬ ತಾಲೂಕಿನಲ್ಲಿ ಅತಿ ಹೆಚ್ಚು 27.3 ಮಿ.ಮೀ. ಮಳೆಯಾಗಿದ್ದು, ಪುತ್ತೂರಿನಲ್ಲಿ 11.3 ಮಿ.ಮೀ., ಉಳ್ಳಾಲದಲ್ಲಿ 10.4 ಮಿ.ಮೀ., ಬೆಳ್ತಂಗಡಿಯಲ್ಲಿ 9.4 ಮಿ.ಮೀ., ಬಂಟ್ವಾಳದಲ್ಲಿ 7.8 ಮಿ.ಮೀ., ಸುಳ್ಯದಲ್ಲಿ 5.3 ಮಿ.ಮೀ., ಮಂಗಳೂರಿನಲ್ಲಿ 4.3 ಮಿ.ಮೀ., ಮೂಲ್ಕಿಯಲ್ಲಿ 4.1 ಮಿ.ಮೀ. ಹಾಗೂ ಮೂಡುಬಿದಿರೆಯಲ್ಲಿ 2.3 ಮಿ.ಮೀ. ಮಳೆ ದಾಖಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಜೂನ್ 10ರಿಂದ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಇದ್ದು, ಜೂನ್ 12ರವರೆಗೆ ವ್ಯಾಪಕ ಹಾಗೂ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!