ಮಂಗಳೂರು ಖಾಸಗಿ ಬಸ್ ಪ್ರಯಾಣ ದರ ಏರಿಕೆ: ಕನಿಷ್ಠ ದರ ₹13ಕ್ಕೆ ಹೆಚ್ಚಳ

ಮಂಗಳೂರು: ನಗರದ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಇಂದಿನಿಂದ ಪರಿಷ್ಕರಿಸಲಾಗಿದ್ದು, ಕನಿಷ್ಠ ಪ್ರಯಾಣ ದರದಲ್ಲಿ ₹1ರಷ್ಟು ಹೆಚ್ಚಳ ಮಾಡಲಾಗಿದೆ.

ಈ ಹಿಂದೆ ಕನಿಷ್ಠ ಬಸ್ ದರ ₹12 ಇದ್ದು, ಹೊಸ ದರ ಪರಿಷ್ಕರಣೆಯಂತೆ ಅದು ₹13ಕ್ಕೆ ಏರಿಕೆಯಾಗಿದೆ. ಇಂಧನ ಬೆಲೆ, ನಿರ್ವಹಣಾ ವೆಚ್ಚ ಹಾಗೂ ಇತರೆ ಕಾರ್ಯಾಚರಣಾ ಖರ್ಚುಗಳ ಹೆಚ್ಚಳದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಬಸ್ ಮಾಲೀಕರ ಸಂಘದ ಮೂಲಗಳು ತಿಳಿಸಿವೆ.

ಹೊಸ ದರ ಪಟ್ಟಿ ಇಂದಿನಿಂದಲೇ ಜಾರಿಗೆ ಬಂದಿದ್ದು, ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಬಸ್‌ಗಳಲ್ಲಿ ಪರಿಷ್ಕೃತ ದರ ಅನ್ವಯವಾಗಲಿದೆ. ದರ ಏರಿಕೆಯಿಂದ ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ ಬೀಳಲಿದ್ದು, ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!