ಮಂಗಳೂರು ನಗರದ ಕೆಲವು ಕಡೆಗಳಲ್ಲಿ ಕಲುಷಿತ ನೀರು ಕೊಟ್ಟು ಕೆಲವರಿಗೆ ಆರೋಗ್ಯ ಹದಗೆಟ್ಟಿದೆ ಕೆಲವರಿಗೆ ವಾಂತಿಭೇದಿಯಾಗಿದೆ, ನೀರು ಕುಡಿದು ಜ್ವರ ಬಂದಿದೆ ಎಂಬ ಸುದ್ದಿಯನ್ನು ಸ್ಥಳೀಯ ಶಾಸಕರಾದ ವೇದವಾಸ್ ಕಾಮತ್ ರವರು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ ಶುದ್ಧ ನೀರು ಕೊಡುವಂತದ್ದು, ಮಂಗಳೂರು ಮಹಾ ನಗರ ಪಾಲಿಕೆ ಜವಾಬ್ದಾರಿ. ಮತ್ತು ಕುಡಿಯುವ ನೀರಿನಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳುವುದು ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ಜವಾಬ್ದಾರಿ ಇದೆ. ಅದಕ್ಕೋಸ್ಕರ ಕೋಟ್ಯಾಂತರ ರೂಪಾಯಿಗಳನ್ನು ನಮ್ಮ ರಾಜ್ಯ ಸರ್ಕಾರದಿಂದ ವಿನಿಯೋಗ ಆಗುತ್ತಿದೆ. ಅದರಲ್ಲಿ ನೀವು ರಾಜಕೀಯವನ್ನು ಬೆಸೆಯುವಂಥದ್ದು ಸರಿಯಾದ ಕ್ರಮ ಅಲ್ಲ.
ನಾನು ಇವತ್ತು ಶಾಸಕರವರ ದೂರಿನನ್ವಯ ಮಂಗಳೂರು ನಗರದ ಬೆಂದೂರಿನಲ್ಲಿರುವ ವಾಟರ್ ಟ್ರೀಟ್ಮೆಂಟ್ ಪ್ಲಾಂಟಿಗೆ ಹೋಗಿದ್ದೆ, ಹೋಗಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ, ಮತ್ತು ಅಧಿಕಾರಿಗಳೊಂದಿಗೆ ಕೇಳಿದ್ದೇನೆ, ನಮ್ಮಲ್ಲಿ ನೀರಿ ಲ್ಯಾಬೋರೇಟರಿ ಇದೆ. ಲ್ಯಾಬ್ ರಿಪೋರ್ಟ್ ಗಳನ್ನು ನೋಡಿದ್ದೇನೆ ಮತ್ತು ಅಧಿಕಾರಿಗಳಿಗೆ ಕೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ ಯಾವುದೇ ಕಾರಣಕ್ಕೂ ನೀರಿನಲ್ಲಿ ಅಂತ ರಿಪೋರ್ಟುಗಳು ಬರಲು ಸಾಧ್ಯವಿಲ್ಲ ನಮ್ಮಲ್ಲಿ ಕುಡಿಯುವ ನೀರು (Portable water ) ಎಂದರೆ ಯೋಗ್ಯ ಇರುವ ನೀರನ್ನೆ ಕೊಡುವುದು ಎಂದು ತಿಳಿಸಿದ್ದಾರೆ.
ಹಾಗಾಗಿ ಇಂತಹ ಸುದ್ದಿಗಳನ್ನು ಹೊರಡಿಸುವ ಮೂಲಕ ಜನರಿಗೆ ತಪ್ಪು ಸುದ್ದಿ ಕೊಡುವಂತದ್ದು ಮತ್ತು ಕಾಂಗ್ರೆಸ್ ನಾ ಆಡಳಿತದಲ್ಲಿ ಆಗಿರುವಂತದ್ದು, ಮತ್ತು ಕುಡಿಯುವ ನೀರು ಯಾವುದೇ ಪಕ್ಷಕ್ಕೆ ಸಂಬಂಧಿಸಿದಲ್ಲ ಕುಡಿಯುವ ನೀರು ವ್ಯವಸ್ಥೆಯು ಎಲ್ಲಾ ಪಕ್ಷಗಳು ಇರುವಾಗ ಮಹಾನಗರ ಪಾಲಿಕೆ ಇದರ ಜವಾಬ್ದಾರಿ ವಹಿಸುವಂಥದ್ದು, ಅದಕ್ಕೆ ಆ ಪಕ್ಷ ಈ ಪಕ್ಷ ಎಂಬುದು ಇಲ್ಲ ಜನರ ಮನಸ್ಸಿನಲ್ಲಿ ಇಂಥ ಮಾತುಗಳನ್ನು ಆಡಿ ಜನರ ಮನಸ್ಸಿನಲ್ಲಿ ಕಲ್ಮಶ ಮೂಡಿಸುವಂತಹ ಕೆಲಸವನ್ನು ಮಾಡುವುದನ್ನು ನಾನು ವಿರೋಧ ಮಾಡುತ್ತಿದ್ದೇನೆ.
ಮತ್ತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಮಾತನಾಡಿ ಈ ಬಗ್ಗೆ ಕೂಡಲೇ ಒಂದು ಕಮಿಟಿಯನ್ನು ಮಾಡಿ ಅಂತಹವುದು ಎಲ್ಲಿ ಆಯ್ತು ಯಾಕಾಯ್ತು, ಯಾವ ಬಾವಿಯ ನೀರು ಕುಡಿದು ಅಯ್ತು, ಬಾವಿ ನೀರು ಕುಡದ್ರೋ ಅಥವಾ ನಗರ ಪಾಲಿಕೆ ಸರಬರಾಜು ಮಾಡುವ ನೀರನ್ನು ಕಡಿದು ಆಯ್ತೋ ? ಇದರ ಬಗ್ಗೆ ತನಿಖೆ ಮಾಬೇಕು ಒಂದು ತನಿಖೆಯ ಸಮಿತಿಯನ್ನು ರಚನೆ ಮಾಡಬೇಕು ಮತ್ತು ಅದರ Reportನ್ನು ಜನರ ಮುಂದೆ ಇಡಬೇಕು ಮತ್ತು ಶಾಸಕರಾದ ವೇದವ್ಯಾಸ ಕಾಮತ್ ರವರು ಎನು ಹೇಳಿಕೆ ಕೊಟ್ಟಿದ್ದಾರೆ? ಅದನ್ನು Clarify ಮಾಡ್ಬೇಕು ಜನರ ಸಮಸ್ಯೆಗಳನ್ನು ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ .ವಿ ಯವರಿಗೆ ಮಾತನಾಡಿ ಹೇಳಿದ್ದೇನೆ ಮಹಾನಗರ ಪಾಲಿಕೆ ಕಮಿಷನರ್ಗೂ ಹೇಳಿದ್ದೇನೆ. ಅಧಿಕಾರಿಗಳಾದ ನರೇಶ್ ಶೆಣೈಯವರಲ್ಲಿಯೂ ಮಾತನಾಡಿದ್ದೇನೆ. ಈ ಒಂದು ಸಂದರ್ಭದಲ್ಲಿ ಕುಡಿಯುವ ನೀರಿನ ಬಗ್ಗೆ ಜಾಗರೂಕತೆಯಾಗಿ ಮಳೆಗಾಲದ ಸಂದರ್ಭದಲ್ಲಿ ರೋಗ ರುಜಿನಗಳು ಬರುವಂತಹ ಸಂದರ್ಭ ಇರುತ್ತದೆ. ನಗರ ಪಾಲಿಕೆಯ ನೀರು ಕುಡಿದು ರೋಗಬಂತು ಎಂದು ಹೇಳುವ ಪರಿಸ್ಥಿತಿ ಯಾವುದೇ ಕಾರಣಕ್ಕೂ ಅಗಬಾರದು ಎಂದು ಸಲಹೆಯನ್ನು ಕೊಟ್ಟಿರುತ್ತೇನೆ.
ನಗರಾಭಿವೃದ್ದಿ ಸಚಿವರಾದ ನ್ಯ ಯತೀಂದ್ರ ಸಿದ್ದರಾಮಯ್ಯರವರಲ್ಲಿಯೂ ಮಾಹಿತಿ ನೀಡಿ ಇಂತಹ ಒಂದು ಘಟನೆಗಳು ಯಾರಿಂದ ಇಂತಹ ಸುದ್ದಿ ಹರಡುತ್ತಿದೆ ಎಂದು ತನಿಖೆ ಮಾಡಬೇಕೆಂದು ಕೋರಿದ್ದೇನೆ. ಅದೇ ರೀತಿ ಇತ್ತೀಚೆಗೆ 1250/ ಕೋಟಿ ರೂಪಾಯಿ ವೆಚ್ಚದಲ್ಲಿ ನಗರಪಾಲಿಕೆಗೆ ವ್ಯಾಪ್ತಿಯಲ್ಲಿ ಡ್ರೈನೇಜ್ ವ್ಯವಸ್ತೆಯನ್ನು ಯುಜಿಡಿಯನ್ನು ಸರಿಪಡಿಸುವ ಯೋಜನೆಯ ಬಗ್ಗೆ ನಗರಾಭಿವೃದ್ದಿ ಸಚಿವರ ಜೊತೆ ಮಾತನಾಡಿದ್ದೇನೆ. ಎಂದು ಐವನ್ ಡಿʼಸೋಜಾರವರು ತಿಳಿಸಿದ್ದಾರೆ. ಸದ್ರಿ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ನೀಯೋಗದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಹಿರಿಯ ಕಾರ್ಪೊರೇಟರ್ ಹಾಗೂ ಮಾಜಿ ಉಪಮೇಯರ್ ಲ್ಯಾನ್ಸಿ ಲೋಟ್ ಪಿಂಟೋ, ಮಾಜಿ ಕಾರ್ಪೊರೇಟರ್ ನವೀನ್ ಡಿ’ಸೋಜಾ, ಮುಖಂಡರಾದ ಹಬೀಬುಲ್ಲ ಕಣ್ಣೂರು, ಕ್ಲೈವ್ ಸ್ಯಾನ್ಸನ್ ವೆಲೆನ್ಸಿಯಾ, ಪ್ರದೇಶದ ಪ್ರಮುಖರು ಹಾಗೂ ಮಂಗಳೂರು ಮಹಾನಗರಪಾಲಿಕೆಯ ಇಂಜಿನಿಯರ್ ಮಿಥುನ್ ಅವರು ಉಪಸ್ಥಿತರಿದ್ದರು.