ಶಿಕ್ಷಣ ಕಾಶಿ ಮಂಗಳೂರಿನಲ್ಲಿ ಸಾಕಷ್ಟು ವಿದ್ಯಾ ಕೇಂದ್ರಗಳಿವೆ.ಆದರೆ ಈ ಭಾಗದಲ್ಲಿನ ಡ್ರಗ್ಸ್ ಹಾವಳಿಗೆ ಅನೇಕ ಯುವಕರು ಬಲಿಯಾಗುತ್ತಿದ್ದಾರೆ ಇದನ್ನು ಸರಕಾರ ತಡೆಯುವಲ್ಲಿ ವಿಫಲವಾಗಿದೆ. ಈ ಭಾಗಗಳಿಗೆ ತೆಲಂಗಾಣ,ಮಹಾರಾಷ್ಟ್ರ,ಕೇರಳ ಭಾಗದಿಂದ ಡ್ರಗ್ಸ್ ಪೂರೈಕೆಯಾಗುತ್ತಿದೆ.ಕರ್ನಾಟಕ ಸರಕಾರದಿಂದ ಡ್ರಗ್ಸ್ ಜಾಲವನ್ನು ಸರಿಯಾಗಿ ಬೇಧಿಸುವ ಪ್ರಯತ್ನಗಳು ನಡೆಯುತ್ತಿಲ್ಲ ಜೊತೆಗೆ ರಾಜಕೀಯ ನಾಯಕರು ಇದರಲ್ಲಿ ಶಾಮೀಲಾಗಿರುವ ಸಾಧ್ಯತೆಗಳು ಆತಂಕಕಾರಿ ವಿಷವಾಗಿದೆ ಎಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಉತ್ತರ ವಲಯದ ಶಾಸಕರಾದ ವೈ ಭರತ್ ಶೆಟ್ಟಿ ಆತಂಕ ವ್ಯಕ್ತಪಡಿಸಿದರು .
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಗುಲ್ಬರ್ಗ ದಕ್ಷಿಣ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಪ್ರಿಯಾಂಕ ಖರ್ಗೆ ಆಪ್ತರಾದ ಲಿಂಗರಾಜ್ ಕಣ್ಣಿ ಯನ್ನು ಮಹಾರಾಷ್ಟ್ರದ ಪೊಲೀಸರು ಮಾದಕ ದ್ರವ್ಯಗಳ ಮಾರಾಟ, ಸ್ವಾಧೀನ ಆರೋಪದ ಅಡಿಯಲ್ಲಿ ಬಂಧಿಸಿದ್ದಾರೆ. ಆದರೆ ಕರ್ನಾಟಕ ಪೊಲೀಸರು ರಾಜಕೀಯ ಪ್ರಭಾವದಿಂದ ಬಂಧಿಸುವಲ್ಲಿ ವಿಫಲರಾಗಿದ್ದಾರೆ.ಈ ವಿಚಾರ ತಿಳಿದಿದ್ದರೂ ಕೂಡ ಪ್ರಿಯಾಂಕ ಖರ್ಗೆ ಗುಲ್ಬರ್ಗವನ್ನು ರಿಪಬ್ಲಿಕ್ ಆಫ್ ಗುಲ್ಬರ್ಗದಂತೆ ಆಡಳಿತ ಮಾಡುತ್ತಿದ್ದಾರೆ.ಡ್ರಗ್ಸ್ ಅಪರಾಧಿಗಳನ್ನು ಆಗೊಮ್ಮೆ ಈಗೊಮ್ಮೆ ಮಾತ್ರ ಸರಕಾರ ಹಿಡಿಯುತ್ತೆ ಆದರೆ ಆ ಪ್ರಕರಣ ಮುಂದೆ ಏನಾಯಿತು ಎನ್ನುವ ಸ್ಪಷ್ಟತೆಯನ್ನು ಅವರು ಮುಂದೆ ನೀಡುವುದಿಲ್ಲ.
ಡ್ರಗ್ಸ್ ಪ್ರಕರಣದಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸಿದ್ದಾರೆ,ಹಾಗಾಗಿ ರಾಜಕೀಯ ವ್ಯಕ್ತಿಗಳು ಈ ಬಗ್ಗೆ ಮಾತನಾಡುತ್ತಿಲ್ಲ.ಸರ್ವಜ್ಞ ಜ್ಞಾನಿಗಳಾಗಿ ಮಾತನಾಡುವ ಪ್ರಿಯಾಂಕಾ ಖರ್ಗೆ ಈ ಬಗ್ಗೆ ಮೌನವಹಿಸಿದ್ದಾರೆ,ಅವರು ಸರಿಯಾದ ತನಿಖೆಗೆ ಆಗ್ರಹಿಸಬೇಕು ಇಲ್ಲವೇ ರಾಜೀನಾಮೆ ನೀಡಬೇಕು .
ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಕರ್ನಾಟಕವನ್ನು ಉಡ್ತಾ ಪಂಜಾಬ್ ಮಾಡೋದಿಲ್ಲ ಎಂದು ಹೇಳಿದರು. ಆದರೆ ಗೃಹ ಸಚಿವರಿಗೆ ಈ ಉಡ್ತಾ ಪಂಜಾಬ್ ಎನ್ನುವ ನೆನಪು ಯಾಕೆ ಬಂತು ? ಈ ವಿಚಾರ ಕೇಳಿದ ನನಗೆ, ಈ ಭಾಗದ ಈ ಗಂಭೀರ ಸಮಸ್ಯೆಯನ್ನು ನೋಡುವಾಗ ಕರ್ನಾಟಕ ಉಡ್ತಾ ಪಂಜಾಬ್ ಆಗ್ತಾ ಇದೆಯೇ ಎನ್ನುವ ಅನುಮಾನ ಕಾಡ್ತಾ ಇದೆ .ಸುದ್ದಿಗೋಷ್ಠಿಯಲ್ಲಿ , ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ , ಬಿಜೆಪಿ ಜಿಲ್ಲಾ ವಕ್ತಾರ ರಾಜ್ ಗೋಪಾಲ್ ರೈ ಮುಂತಾದವರು ಉಪಸ್ಥಿತರಿದ್ದರು.